ಮುಂಬೈ

ಜಿಯೋದಿಂದ 1 ಸಾವಿರಕ್ಕೆ 4ಜಿ ಪೋನ್!

Pinterest LinkedIn Tumblr

jioಮುಂಬೈ: ನೋಟಿನ ಸುದ್ದಿಗಳ ಮಧ್ಯ ನಾಪತ್ತೆಯಾಗಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋದಿಂದ ಹೊಸದೊಂದು ಸುದ್ದಿ ಹೊರಬಂದಿದೆ. ಮಾರುಕಟ್ಟೆಯಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿಯನ್ನು ಸೃಷ್ಟಿಸುವ ಯತ್ನ ನಡೆಯುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 4ಜಿ ಸ್ಮಾರ್ಟ್ ಪೋನ್ ಗಳಿಗೆ ಮಾತ್ರ ಜಿಯೋ ಸಿಮ್ ಹಾಕಬಹುದಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಕೈಗೆಟುಕುವ ಬೆಲೆಯಲ್ಲಿ ಹೊಸ ಪೋನ್ ಬಿಡುಗಡೆ ಮಾಡಲು ಮುಂದಾಗಿದೆ.
ಸಾಮಾನ್ಯ ಜನರ ಹಿತ ದೃಷ್ಟಿಯಿಂದ, ದುಡಿಯುವ ವರ್ಗಕ್ಕೆ ಖರೀದಿ ಸುಲಭವಾಗುವಂತೆ 1000ರೂ ಗಳಿಗೆ 4ಜಿ ಫೀಚರ್ ಪೋನ್ ಬಿಡುಗಡೆ ಮಾಡಲು ಜಿಯೋ ಸಿದ್ಧತೆ ನಡೆಸಿದ್ದು, ಈ ಮೂಲಕ ಅಸಂಖ್ಯಾತ ಜನರನ್ನು ತಲುಪುವ ಯತ್ನಕ್ಕೆ ಕೈ ಹಾಕಿದೆ. ಈ 1000 ರೂ. ಪೋನ್ ನಲ್ಲಿ 4ಜಿ ನೆಟ್ ವರ್ಕ್ ಕನೆಕ್ಟ್ ಆಗಲಿದ್ದು, ಅ ಮೂಲಕ ಕಾಲ್ ಮಾಡಬಹುದಾಗಿದೆ.
ಸದ್ಯ ಈಗಾಗಲೇ ಸ್ಮಾರ್ಟ್ ಪೋನ್ ಬಳಕೆದಾದರು ಜಿಯೋಗಾಗಿಯೇ 4ಜಿ ಸಪೋರ್ಟ್ ಮಾಡುವ ಪೋನ್ ಗಳನ್ನು ಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಜನರು ಜಿಯೋ ಬಳಸುವಂತಗಾಗಲಿ ಎಂಬ ಆಶಯದಿಂದ ಈ ಹೊಸ ಯತ್ನಕ್ಕೆ ಕೈ ಹಾಕಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರು 4ಜಿ ಸಪೊರ್ಟ್ ಮೊಬೈಲ್ ಗಳು 5000ರೂ ಗಳಿಗಿಂತ ಹೆಚ್ಚಿದೆ. ಇದನ್ನು ಮನದಲ್ಲಿಟ್ಟುಕೊಂಡು ಸಾವಿರ ಇಲ್ಲವೇ ಒಂದುವರೆ ಸಾವಿರಕ್ಕೆ ಹೊಸ ಮೊಬೈಲ್ ಬಿಡುಗಡೆಯಾಗಲಿದೆ.

Comments are closed.