ಮುಂಬೈ

ನೋಟು ರದ್ದು ಪರಿಣಾಮ: ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ

Pinterest LinkedIn Tumblr

bseಮುಂಬೈ: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಗದ್ದುಗೆಗೇರಿದ ನಂತರ ರೂಪಾಯಿ ಮೌಲ್ಯ ಕುಸಿಯತೊಡಗಿದೆ. ಇದೀಗ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದಲೂ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಇತ್ತ ಅಮೆರಿಕನ್ ಡಾಲರ್ ಮೌಲ್ಯವು 14 ವರ್ಷಗಳಲ್ಲಿ ಅತೀ ಹೆಚ್ಚು ಮೌಲ್ಯವಾಗಿ ವೃದ್ಧಿಯಾಗಿದೆ.

ಡಾಲರ್‌ ಎದುರು ರೂಪಾಯಿ ದುರ್ಬಲಗೊಂಡ ಹಿನ್ನೆಲೆಯಲ್ಲಿ ಹಾಗೂ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಿರುವ ಕಾರಣ ಮುಂಬಯಿ ಷೇರು ಪೇಟೆಯ ಸೂಚ್ಯಂಕ ಇಂದು ಆರಂಭಿಕ ವಹಿವಾಟಿನಲ್ಲಿ 344 ಅಂಕಗಳ ಕುಸಿತವನ್ನು ಕಂಡಿತು.

ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು

* ಡಾಲರ್ ಮುಂದೆ ರೂಪಾಯಿ ಮೌಲ್ಯ 50 ಪೈಸೆ ಕುಸಿದಿದ್ದು, ಮೌಲ್ಯವೀಗ 67.75 ಆಗಿದೆ. ಈ ಮೂಲಕ ಕಳೆದ ಐದು ತಿಂಗಳಲ್ಲಿ ಡಾಲರ್ ಎದುರು ರೂಪಾಯಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

* 6 ಗ್ಲೋಬಲ್ ಕರೆನ್ಸಿಗಳ ಮೌಲ್ಯ ಡಾಲರ್ ಮುಂದೆ 100 ರೂಪಾಯಿಯಷ್ಟಾಗಿದೆ.

* ಹಣದುಬ್ಬರ ಪರಿಗಣಿಸಿ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

* ಟ್ರಂಪ್ ಗೆಲುವು ಸಾಧಿಸಿದ ನಂತರ ವಿದೇಶಿ ಹೂಡಿಕೆಗಳು ದೇಶೀಯ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿವೆ. ಕಳೆದ ಶುಕ್ರವಾರ 1500 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಮಾರಾಟವಾಗಿತ್ತು.

* ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 380 ಅಂಕ ಮತ್ತು ನಿಫ್ಟಿ 146 ಅಂಕ ಕುಸಿತ ಕಂಡಿದೆ.

Comments are closed.