ಮುಂಬೈ

ಮಹಾಡ್ ಸೇತುವೆ ದುರಂತ: 8 ದಿನಗಳ ಬಳಿಕ 2 ಬಸ್ ಪತ್ತೆ

Pinterest LinkedIn Tumblr

mahadಮುಂಬಯಿ: ಮಹಾರಾಷ್ಟ್ರದ ಮಹಾಡ್‌ನ‌ಲ್ಲಿ ಕಳೆದ 8 ದಿನಗಳ ಹಿಂದೆ ಬ್ರಿಟಿಷರ ಕಾಲದ ಸೇತುವೆ ಕೊಚ್ಚಿ ಹೋದ ಪರಿಣಾಮ ನಾಪತ್ತೆಯಾಗಿದ್ದ ಎರಡು ಸರ್ಕಾರಿ ಬಸ್‌ಗಳ ಅವಶೇಷಗಳು ಪತ್ತೆಯಾಗಿವೆ.

8 ದಿನಗಳಿಂದ ಅವಿರತ ಕಾರ್ಯಾಚರಣೆ ನಡೆಸುತ್ತಿರುವ ನೌಕಾ ಪಡೆ ಕೊನೆಗೂ ಬಸ್‌ಗಳನ್ನು ಪತ್ತೆ ಹಚ್ಚಿದ್ದು ಸೇತುವೆ ಕುಸಿದ ಜಾಗದಿಂದ ಸುಮಾರು 170ರಿಂದ 200 ಮೀಟರ್‌ ದೂರದಲ್ಲಿ ನದಿಯಾಳದಲ್ಲಿ ಕೊಚ್ಚಿ ಹೋದ ಬಸ್ಸುಗಳ ಅವಶೇಷಗಳು ಪತ್ತೆಯಾಗಿವೆ ಎಂದು ರಕ್ಷಣಾ ಪಿಆರ್‌ಓ ಸ್ಪಷ್ಟ ಪಡಿಸಿದ್ದಾರೆ.

ಕಡಿಮೆಯಾಗದ ಸಾವಿತ್ರಿ ನದಿ ಪ್ರವಾಹ ಹಾಗೂ ಅಪಾಯಕಾರಿ ಮೊಸಳೆಗಳಿಗೆ ಬೆದರದೆ ಅವಿರತ ಕಾರ್ಯಾಚರಣೆ ನಡೆಸಿದ ನೌಕಾ ಪಡೆಯ ರಕ್ಷಣಾ ತಂಡದ ಮುಳುಗುಗಾರರು ಕೊನೆಗೂ ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ. ಆದರೆ ಈ ರಕ್ಷಣಾ ಕಾರ್ಯ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ನಾಪತ್ತೆಯಾದ ಪ್ರಯಾಣಿಕರ ಕುಟುಂಬದವರು ಆರೋಪಿಸಿದ್ದಾರೆ.

ದುರಂತದಲ್ಲಿ ಮೃತ ಪಟ್ಟ 26 ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದೆ. ಆದರೆ ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ. ಅವರೆಲ್ಲ ಬದುಕುಳಿದಿರುವ ಸಾಧ್ಯತೆಗಳು ತೀರ ಕಡಿಮೆ ಇದೆ. ಆದರೆ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ 2ರಂದು ಮುಂಬಯಿ -ಗೋವಾ ಹೆದ್ದಾರಿಯಲ್ಲಿ ಬ್ರಿಟಿಷ್ ಕಾಲದ ಮಹಾಡ್‌ ಸೇತುವೆ ಕುಸಿದು ಎರಡು ಬಸ್, ಎರಡು ಕಾರ್ ಸೇರಿದಂತೆ ಹಲವು ವಾಹನಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿದ್ದವು.

Comments are closed.