ಮುಂಬೈ: ಸಾರ್ವಜನಿಕ ಪ್ರದೇಶದಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಫೋಟೋವನ್ನು ಯುವತಿಯೊಬ್ಬರು ಕ್ಲಿಕ್ಕಿಸಿ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿದ್ದರಿಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಂಗಳವಾರ ಯುವತಿಯರಿಬ್ಬರು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಬೈಕ್ ಚಲಾಯಿಸುತ್ತಿದ್ದಂತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ನೋಡಿ ಹಸ್ತಮೈಥುನಾ ಮಾಡಿಕೊಂಡಿದ್ದಾನೆ. ಕೂಡಲೆ ಓರ್ವ ಯುವತಿ ತಮ್ಮ ಮೊಬೈಲ್ ನಲ್ಲಿ ವ್ಯಕ್ತಿಯ ಹಸ್ತಮೈಥುನದ ಫೋಟೋವನ್ನು ಕ್ಲಿಕ್ಕಿಸಿ ನನ್ನ ಸ್ನೇಹಿತೆಯನ್ನು ಕಂಡ ತಕ್ಷಣ ವ್ಯಕ್ತಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಕೂಡಲೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ವ್ಯಕ್ತಿಯ ಫೋಟೋವನ್ನು ಕಂಡ ತಕ್ಷಣ 15 ನಿಮಿಷದಲ್ಲಿ ಯುವತಿಯ ಫೋನಿಗೆ ಟ್ವೀಟ್ ಮಾಡಿ ಮಾಹಿತಿ ಸಂಗ್ರಹಿಸಿ ಕೇವಲ 3 ಗಂಟೆಯೊಳಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಯುವತಿ ವ್ಯಕ್ತಿಯ ಬೈಕ್ ನ ನಂಬರ್ ಪ್ಲೇಟ್ ಕ್ಲಿಕ್ಕಿಸಿದ್ದರಿಂದ ವ್ಯಕ್ತಿಯನ್ನು ಬಂಧಿಸಲು ಸಹಾಯಕವಾಯಿತು ಎಂದು ಯುವತಿಯರ ಸಮಯ ಪ್ರಜ್ಞೆಗೆ ಶಹಬ್ಬಾಸ್ ಗಿರಿ ಹೇಳಿದ್ದಾರೆ.
ಬಂಧಿತ ವ್ಯಕ್ತಿ ಬಾಂದ್ರಾ ಮೂಲದ 35 ವರ್ಷದ ರಾಯ್ಸ್ ಲಿಕಾಯತ್ ಖುರೇಶಿ ಎಂದು ಗುರುತಿಸಲಾಗಿದೆ.
Comments are closed.