ಮುಂಬೈ

ಇನ್‌ಫೋಸಿಸ್‌ ಶೇ.9 ಕುಸಿತ : ಮುಂಬಯಿ ಶೇರು ಪೇಟೆಗೆ 106 ಅಂಕ ನಷ್ಟ

Pinterest LinkedIn Tumblr

SENSEX-FALLS-600ಮುಂಬಯಿ: ಐಟಿ ದಿಗ್ಗಜ ಇನ್‌ಫೋಸಿಸ್‌ ನಿರಾಶಾದಾಯಕ ಮೊದಲ ತ್ತೈಮಾಸಿಕ ಫ‌ಲಿತಾಂಶ ಪ್ರಕಟಿಸಿದುದನ್ನು ಅನುಸರಿಸಿ ಅದರ ಶೇರು ಧಾರಣೆ ಶೇ.9ರಷ್ಟು ಕುಸಿದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಶುಕ್ರವಾರ 105.61 ಅಂಕಗಳ ಕುಸಿತದೊಂದಿಗೆ ದಿನದ ವಹಿವಾಟನ್ನು 27,836.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.6 ಅಂಕಗಳ ನಷ್ಟದೊಂದಿಗೆ 8,541.40 ಅಂಕಗಳ ಮಟ್ಟಕ್ಕೆ ಕುಸಿದು ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.

ಇನ್‌ಫೋಸಿಸ್‌ ಸಂಸ್ಥೆ ತನ್ನ ಆದಾಯ ಅಂದಾಜನ್ನು ಕಡಿತಗೊಳಿಸಿರುವುದು ಹಾಗೂ ಮೊದಲ ತ್ತೈಮಾಸಿಕದಲ್ಲಿ ನಿರಾಶಾದಾಯಕ ಫ‌ಲಿತಾಂಶ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳ ಶೇರುಗಳು ಒಟ್ಟಾರೆಯಾಗಿ ಇಂದು ಶೇ. 5ರಷ್ಟು ಕುಸಿದದ್ದು ವಿಶೇಷವೆನಿಸಿತು.

ಇಂದಿನ ವಹಿವಾಟಿನಲ್ಲಿ ಟಿಸಿಎಸ್‌ ಶೇ.3.11, ವಿಪ್ರೋ ಶೇ.2.81, ಕೋಲ್‌ ಇಂಡಿಯಾ ಶೇ.1.48 ಮತ್ತು ಎನ್‌ಟಿಪಿಸಿ ಶೇರು ಶೇ.1.20 ಕುಸಿಯಿತು.

ಇದೇ ವೇಳೆ ಟಾಟಾ ಸ್ಟೀಲ್‌, ಭಾರ್ತಿ ಏರ್‌ಟೆಲ್‌, ಎಚ್‌ಡಿಎಫ್ಸಿ ಬ್ಯಾಂಕ್‌, ಎಚ್‌ಡಿಎಫ್ಸಿ, ಟಾಟಾ ಮೋಟರ್‌ ತಕ್ಕ ಮಟ್ಟಿನ ಏರಿಕೆಯನ್ನು ಸಾಧಿಸಿದವು.

ಇಂದು 3,044 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು. 1,068 ಶೇರುಗಳು ಮುನ್ನಡೆ ಸಾಧಿಸಿದರೆ 1,753 ಶೇರುಗಳು ಹಿನ್ನಡೆಗೆ ಗುರಿಯಾದವು. 223 ಶೇರುಗಳು ಇದ್ದಲ್ಲೇ ಉಳಿದವು.
-ಉದಯವಾಣಿ

Comments are closed.