
ಮುಂಬೈ : ಗಣ್ಯ ವ್ಯಕ್ತಿಗಳಿಗೆ ತಮ್ಮ ವೈಯುಕ್ತಿಕ ಮಾಹಿತಿಗಳನ್ನು ತೋರ್ಪಡಿಸಲು ಫೇಸ್’ಬುಕ್ ಹಾಗೂ ಟ್ವಿಟರ್ ಪ್ರಮುಖ ಹೆಬ್ಬಾಗಿಲು. ಸಿನಿಮಾ ಮಂದಿಗಂತು ಇದಿಲ್ಲದಿದ್ದರೆ ತಮ್ಮ ದಿನ ನಿತ್ಯದ ಯಾವುದೇ ಕೆಲಸ ಕಾರ್ಯಗಳು ಮುಂದೆ ಸಾಗುವುದಿಲ್ಲ. ಆದರೆ ಇಲ್ಲೊಬ್ಬರು ಬಾಲಿವುಡ್ ನಟಿ ಫೇಸ್’ಬುಕ್, ಟ್ವಿಟರ್’ನಂಥ ಯಾವುದೇ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿಲ್ಲ. ಅವರ್ಯಾರು ಅಂತೀರ ಅವರೇ ಧ್ವನಿಯಲ್ಲೇ ಗ್ರಹಿಸಬಹುದಾದ ನಟಿ ‘ರಾಣಿ ಮುಖರ್ಜಿ’
ಅವರು ಫೇಸ್’ಬುಕ್, ಟ್ವಿಟರ್ ಬಳಸದಿರುವುದಕ್ಕೆ ಕಾರಣ ನೀಡುತ್ತಿರುವುದು ಪ್ರಮುಖ ಕಾರಣವೆಂದರೆ ಇತ್ತೀಚಿಗೆ ಆಗುತ್ತಿರುವ ಹ್ಯಾಕ್’ಗಳು ಹಾಗೂ ನಕಲಿ ಅಕೌಂಟ್’ಗಳು. ನಕಲಿ ಅಕೌಂಟ್’ಗಳಿಂದ ರಾಣಿ ಮುಖರ್ಜಿ ಹಲವು ಸಮಸ್ಯೆ ಎದುರಿಸಿದ್ದಾರಂತೆ. ಒಂದು ವೇಳೆ ನನ್ನದಾವುದಾದರೂ ಇದ್ದರೆ ಅವು ಫೇಕ್ ಎಂದು ಹೇಳಿದ್ದಾರೆ. 2014 ರಲ್ಲಿ ಆದಿತ್ಯರನ್ನು ಮದುವಿಯಾದ ರಾಣಿಗೆ ಕಳೆದ ವರ್ಷ ಅಧಿರಾ ಎಂಬ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ.
Comments are closed.