ಮುಂಬೈ

ಅಂಬೇಡ್ಕರ್‌ ಮೊಮ್ಮಕ್ಕಳು ಗೂಂಡಗಳು: ಗಾಯಕ್‌ವಾಡ್‌

Pinterest LinkedIn Tumblr

Ratnakar-Gaikwad-380ಮುಂಬೈ: ದಾದ್ರದಲ್ಲಿನ ಬಾಬಾ ಸಾಹೇಬ್‌ ಅಂಬೇಡ್ಕರ್‌ ಭವನ ನೆಲಸಮ ಪ್ರಕರಣ ಹೊಸ ತಿರುವು ಪಡೆದಿದ್ದು ಮಹಾರಾಷ್ಟ್ರದ ಮಾಹಿತಿ ಆಯುಕ್ತರಾದ ರತ್ನಾಕರ್‌ ಗಾಯಕ್‌ವಾಡ್‌ ಅವರು ಅಂಬೇಡ್ಕರ್‌ ಅವರ ಸಹೋದರರು ಮತ್ತು ಮೊಮ್ಮಕ್ಕಳು ಗೂಂಡಗಳು ಎಂದು ದೂರಿದ್ದಾರೆ.

ಆನ್‌ಲೈನ್‌ ಸುದ್ದಿ ಜಾಲ ‘ಫಸ್ಟ್‌ಪೋಸ್ಟ್‌’ಗೆ ನೀಡಿರುವ ಸಂದರ್ಶನದಲ್ಲಿ ಗಾಯಕ್‌ವಾಡ್‌ ಅವರು ಅಂಬೇಡ್ಕರ್‌ ಅವರ ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಮಾಡಿದ್ದಾರೆ.

ಏನಿದು ಪ್ರಕರಣ?
ಮಹಾರಾಷ್ಟ್ರ ಸರ್ಕಾರ 72 ವರ್ಷ ಹಳೆಯದಾದ ಅಂಬೇಡ್ಕರ್‌ ಭವನವನ್ನು ನೆಲಸಮಗೊಳಿಸಿ 17 ಅಂತಸ್ತಿನ ನೂತನ ಕಟ್ಟಡ ಕಟ್ಟಲು ಉದ್ದೇಶಿಸಿದೆ. ಆದರೆ ಈ ಆಸ್ತಿ ತಮಗೆ ಸೇರಬೇಕು ಎಂಬುದು ಅಂಬೇಡ್ಕರ್‌ ಸಂಬಂಧಿಗಳ ವಾದವಾಗಿದೆ.

ಟ್ರಸ್ಟ್‌ಗೆ ಸೇರಿರುವ ಈ ಆಸ್ತಿಯಲ್ಲಿ ತಮ್ಮ ಕುಟುಂಬದವರು ಮತ್ತು ಸಂಬಂಧಿಗಳಿಗೆ ಯಾವುದೇ ಪಾಲಿಲ್ಲ ಎಂದು ಅಂಬೇಡ್ಕರ್‌ ಸ್ಪಷ್ಟವಾಗಿ ತಿಳಿಸಿದ್ದರೂ ಅವರ ಸಂಬಂಧಿಗಳು ಗೂಂಡಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗಾಯಕ್‌ವಾಡ್‌ ಆರೋಪಿಸಿದ್ದಾರೆ.

Comments are closed.