ಮುಂಬೈ

ಏರುತ್ತಲೇ ಇದೆ ಚಿನ್ನದ ಬೆಲೆ…10 ಗ್ರಾಂ. ಚಿನ್ನದ ಬೆಲೆ ₹30,755

Pinterest LinkedIn Tumblr

gild

ಮುಂಬೈ: ‘ಬ್ರೆಕ್ಸಿಟ್‌’ ದೇಶದ ಚಿನಿವಾರ ಪೇಟೆ ಮೇಲೆ ಧನಾತ್ಮಕ ಪ್ರಭಾವ ಬೀರಿತು. 10 ಗ್ರಾಂ ಚಿನ್ನದ ಬೆಲೆಯು ₹ 30 ಸಾವಿರ ಗಡಿ ದಾಟಿತು.

ಒಂದೇ ದಿನ 10 ಗ್ರಾಂ.ಗೆ ₹1,225ರಷ್ಟು ಗರಿಷ್ಠ ಏರಿಕೆ ಕಂಡು, ₹29,530 ರಿಂದ ₹30,755ಕ್ಕೆ ಏರಿಕೆಯಾಯಿತು. ಶುದ್ಧ ಚಿನ್ನವೂ ಸಹ ₹29,680 ರಿಂದ ₹30,905ಕ್ಕೆ ಏರಿಕೆಯಾಗಿದೆ. ಇದು ಎರಡು ವರ್ಷಗಳಲ್ಲಿನ ಗರಿಷ್ಠ ಬೆಲೆಯಾಗಿದೆ. ಬೆಳ್ಳಿ ಬೆಲೆಯೂ ಕೆ.ಜಿಗೆ ₹1,575ರಷ್ಟು ಏರಿಕೆ ಕಂಡು, ₹42,930ರಂತೆ ಮಾರಾಟವಾಯಿತು.

ದೆಹಲಿಯಲ್ಲಿ ಚಿನ್ನ 10 ಗ್ರಾಂಗೆ ₹1,215ರಷ್ಟು ಏರಿಕೆಯಾಗಿ, ₹30,885ರಂತೆ, ಬೆಳ್ಳಿ ಕೆ.ಜಿಗೆ ₹1000 ರಷ್ಟು ಹೆಚ್ಚಾಗಿ, ₹42,300ರಂತೆ ಮಾರಾಟವಾಗಿದೆ. ಷೇರುಪೇಟೆ ಸೂಚ್ಯಂಕ ಮತ್ತು ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಖಿಲ ಭಾರತ ಸರಫ್‌ಒಕ್ಕೂಟದ ಉಪಾಧ್ಯಕ್ಷ ಸುರೇಂದರ್‌ಕುಮಾರ್‌ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಧಾರಣೆ ಶೇ 8ರಷ್ಟು ಏರಿಕೆ ಕಂಡಿದೆ.

ಮುಂಬೈ ಧಾರಣೆ: ಸ್ಟ್ಯಾಂಡರ್ಡ್ (10ಗ್ರಾಂ) ₹30,755, ಶುದ್ಧ ಚಿನ್ನ (10ಗ್ರಾಂ) 30,905, ಶುದ್ಧ ಬೆಳ್ಳಿ ಕೆ.ಜಿಗೆ ₹ 42,930.

Comments are closed.