ಮುಂಬೈ (ಪಿಟಿಐ): ‘ಉಡ್ತಾ ಪಂಜಾಬ್’ ಸಿನಿಮಾದಲ್ಲಿ ಕತ್ತರಿ ಪ್ರಯೋಗ ಮಾಡಿರುವ ಸೆನ್ಸಾರ್ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ಪ್ರಸ್ತುತ ಸಿನಿಮಾದ ನಿರ್ಮಾಪಕರು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರದ ಆದೇಶದ ಪ್ರತಿಯನ್ನಾಗಲೀ, ಸೆನ್ಸಾರ್ ಮಂಡಳಿಯ ಆದೇಶದ ಪ್ರತಿಯನ್ನಾಗಲೀ ಸೆನ್ಸಾರ್ ಮಂಡಳಿ ನಮ್ಮ ಕೈಗೆ ಕೊಟ್ಟಿಲ್ಲ ಎಂದು ಚಿತ್ರದ ನಿರ್ಮಾಪಕರು ಹೈಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.
ಉಡ್ತಾ ಪಂಜಾಬ್ ಚಿತ್ರವನ್ನು ಜೂನ್ 17ರಂದು ಬಿಡುಗಡೆ ಮಾಡಲು ತೀರ್ಮಾನಿಸಲಾಗಿತ್ತು.
ಅನುರಾಗ್ ಕಶ್ಯಪ್ ಅವರ ನಿರ್ಮಾಣ ಮತ್ತು ವಿತರಣಾ ಕಂಪನಿಯಾದ ಫಾಂಟಂ ಫಿಲಂಸ್ ನ್ಯಾಯಾಲಯಕ್ಕೆ ಈ ಅಹವಾಲು ಸಲ್ಲಿಸಿದೆ. ಸಿನಿಮಾದಲ್ಲಿರುವ ಆಕ್ಷೇಪಾರ್ಹ ಸಂಗತಿಗಳೇನು? ಕತ್ತರಿ ಪ್ರಯೋಗ ಮಾಡಿದ ಸಂಗತಿಗಳು ಯಾವುವು? ಎಂಬುದರ ಬಗ್ಗೆ ವಿಮರ್ಶಾ ಸಮಿತಿಯ ನಿರ್ಧಾರದ ಪ್ರತಿಯನ್ನು ತಮಗೆ ನೀಡಬೇಕೆಂದು ಈ ಅಹವಾಲಿನಲ್ಲಿ ನಿರ್ಮಾಪಕರು ಒತ್ತಾಯಿಸಿದ್ದಾರೆ.
Comments are closed.