ಮುಂಬೈ

ನಮೋ ಟೀ ಸ್ಟಾಲ್‌ಗೆ ವಿರುದ್ಧವಾಗಿ ಶಿವಸೇನೆಯ ಶಿವಾ ವಡಾ ಪಾವ್

Pinterest LinkedIn Tumblr

shivaಮುಂಬೈ: ಪ್ರಧಾನಿ ಮೋದಿಯವರ ನಮೋ ಟೀ ಸ್ಟಾಲ್‌ಗೆ ಪರ್ಯಾಯವಾಗಿ ಶಿವಸೇನೆ ಮುಂಬೈ ನಗರಾದ್ಯಂತ ಶಿವಾ ವಡಾ ಪಾವ್ ತಿಂಡಿ ತಿನಿಸುಗಳನ್ನು ಮಾರುಕಟ್ಟೆಗೆ ತಂದಿದೆ.

ಮುಂಬೈ ನಗರಸಭೆಯಲ್ಲಿ ಮಿತ್ರಪಕ್ಷವಾಗಿರುವ ಬಿಜೆಪಿ, ಮುಂಬೈ ನಗರದಲ್ಲಿ ನಮೋ ಟೀ ಸ್ಟಾಲ್‌ಗಳನ್ನು ತೆರೆಯುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಶಿವಸೇನೆ ಶಿವ ವಡಾ ಪಾವ್ ಆರಂಭಿಸಿದೆ.

ಕೌನ್ಸಿಲರ್ ಪ್ರಕಾಶ್ ಗಂಗಾಧರೆ ನಮೋ ಟೀ ಸ್ಟಾಲ್ ಆರಂಭಿಸುವ ಬಗ್ಗೆ ಪ್ರಸ್ತಾವನೆಯನ್ನಿಟ್ಟದ್ದರು. ನಾವು ಪಕ್ಷದ ಇತರ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದು ಬಿಜೆಪಿ ಮುಖಂಡ ಮನೋಜ್ ಕೋಟಾಕ್ ತಿಳಿಸಿದ್ದಾರೆ.

ಆದರೆ, ವಿಪಕ್ಷಗಳು ಬಿಜೆಪಿ ಮತ್ತು ಶಿವಸೇನೆಯ ತೀರ್ಮಾನದ ವಿರುದ್ಧ ವಾಗ್ದಾಳಿ ನಡೆಸಿವೆ.

ವಿಪಕ್ಷ ನಾಯಕರಾದ ಪ್ರವೀಣ್ ಚೆಡ್ಡಾ ಮಾತನಾಡಿ, ಇದೊಂದು ಹೊಸ ಡ್ರಾಮಾದಂತೆ. ವೈಯಕ್ತಿಕ ಹೆಸರಿನಲ್ಲಿ ಉಪಹಾರ ಗೃಹಗಳನ್ನು ಆರಂಭಿಸುವ ಬಗ್ಗೆ ನಗರಸಭೆಯಲ್ಲಿ ಯಾವುದೇ ಕಾನೂನಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Comments are closed.