ಮುಂಬೈ

ಬರದ ನಡುವೆಯೂ ಐಪಿಲ್ ಉದ್ಘಾಟನಾ ಪಂದ್ಯಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್

Pinterest LinkedIn Tumblr

ipl-9ಮುಂಬೈ: ತೀವ್ರ ಬರದ ನಡುವೆಯೂ ಐಪಿಎಲ್ ಸೀಸನ್ 9ರ ಉದ್ಘಾಟನಾ ಪಂದ್ಯಕ್ಕೆ ತಡೆ ನೀಡಲು ನಿರಾಕರಿಸಿರುವ ಬಾಂಬೆ ಹೈಕೋರ್ಟ್, ಕ್ರೀಡಾಂಗಣಕ್ಕೆ ಬೇಕಾದ ನೀರನ್ನು ಮಹಾರಾಷ್ಟ್ರ ಸರ್ಕಾರ ನೀಡುವುದಾಗಿ ಸಮ್ಮತಿ ಸೂಚಿಸಿದ ನಂತರ ಎಪ್ರಿಲ್ 9ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯದಲ್ಲಿ ಕುಡಿಯಲು ನೀರಿಲ್ಲದೆ ಇರುವಾಗ ಕ್ರೀಡಾಂಗಣಕ್ಕೆ ಹೇಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯಕ್ಕೆ ತಡೆ ನೀಡಬೇಕು ಎಂದು ಕೋರಿ ಎನ್ ಜಿಒ ಸಂಘಟನೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಎಂ ಕಾನಡೆ ಹಾಗೂ ನ್ಯಾಯಮೂರ್ತಿ ಎಂಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ಕುರಿತು ಸರ್ಕಾರದ ಬಳಿ ಮಾಹಿತಿ ಕೇಳಿತ್ತು. ಇದಕ್ಕೆ ಸರ್ಕಾರ ಪ್ರಥಮ ಪಂದ್ಯಕ್ಕೆ ನೀರು ಒದಗಿಸಲು ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಕೋರ್ಟ್ ಉದ್ಘಾಟನಾ ಪಂದ್ಯ ನಡೆಸಲು ಸಮ್ಮತಿ ಸೂಚಿಸಿದೆ
ಇದೇ ವೇಳೆ ಪಂದ್ಯ ನಡೆಯುವ ಕ್ರೀಡಾಂಗಣಕ್ಕೆ ಬಿಸಿಸಿಐ ಒದಗಿಸುವ ನೀರು ಕುಡಿಯಲು ಯೋಗ್ಯವಾದದ್ದೋ? ಅಥವಾ ಇಲ್ಲವೋ ಎಂದು ತನಿಖೆ ನಡೆಸುವಂತೆ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯದಲ್ಲಿ ಸುಮಾರು 70%ರಷ್ಟು ಭಾಗ ಬರಗಾಲದಲ್ಲಿರುವಾಗ ಐಪಿಎಲ್ ಪಂದ್ಯ ಆಯೋಜನೆ ಮಾಡುತ್ತಿರುವುದಕ್ಕೆ ಬಿಸಿಸಿಐ ಹಾಗು ಮುಂಬೈ ಕ್ರಿಕೆಟ್ ಮಂಡಳಿಯನ್ನು ಬುಧವಾರ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಬಿಸಿಸಿಐ ರಾಜ್ಯದ ಮುಂಬೈ, ನಾಗ್ಪುರ ಹಾಗೂ ಪುಣೆಯಲ್ಲಿ ಒಟ್ಟು 20 ಪಂದ್ಯಗಳನ್ನು ಆಯೋಜನೆ ಮಾಡಿದೆ.

Write A Comment