ಮುಂಬೈ

ಎಸ್‌ಬಿಐ ಗೃಹ ಸಾಲ ‘ಇಎಂಐ’ ಇಳಿಕೆ

Pinterest LinkedIn Tumblr

TAXwebಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ 9.5ರಿಂದ ಶೇ 9.4ಕ್ಕೆ ತಗ್ಗಿಸಿದೆ. ಇದರಿಂದ ಈಗಾಗಲೇ ಸಾಲ ಪಡೆದು ಮರು ಪಾವತಿಸುತ್ತಿರುವವರ ಸಾಲದ ಸಮಾನ ಮಾಸಿಕ ಕಂತು (ಇಎಂಐ) ₹300ರಷ್ಟು ಕಡಿಮೆಯಾಗಲಿದೆ.
15 ವರ್ಷಗಳ ಅವಧಿಗೆ 50 ಲಕ್ಷದವರೆಗೆ ಗೃಹ ಸಾಲ ಪಡೆದಿರುವವರ ‘ಇಎಂಐ’ ₹300 ರಷ್ಟು ಕಡಿಮೆಯಾಗಲಿದೆ. ‘ಎಸ್‌ಬಿಐ’ ಬಡ್ಡಿ ಕಡಿತದ ಬೆನ್ನಲ್ಲೇ, ಇನ್ನಿತರ ಬ್ಯಾಂಕುಗಳು ಕೂಡ ಬಡ್ಡಿ ಇಳಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಬ್ಯಾಂಕುಗಳು ತಮ್ಮ ಬಡ್ಡಿ ದರ ಲೆಕ್ಕಚಾರ ಮಾಡುವ ಮತ್ತು ಪರಿಷ್ಕರಣೆ ಮಾಡುವ ವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಳೆದ ಡಿಸೆಂಬರ್‌ನಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇದರಡಿ ಬಡ್ಡಿ ದರ ಪರಿಷ್ಕರಣೆಗೆ ಬ್ಯಾಂಕುಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮಾರ್ಜಿನಲ್‌ ಕಾಸ್ಟ್‌ ಆಫ್‌ ಲೆಂಡಿಂಗ್‌ ರೇಟ್‌ (ಎಂಸಿಎಲ್‌ಆರ್‌) ಎನ್ನುವ ಈ ವ್ಯವಸ್ಥೆಯಡಿ ಇದೀಗ ‘ಎಸ್‌ಬಿಐ’ ಬಡ್ಡಿ ದರ ಇಳಿಕೆ ಮಾಡಿದೆ.
ಐಸಿಐಸಿಐ ಬ್ಯಾಂಕ್‌ ಕೂಡ ಒಂದು ವರ್ಷ ಅವಧಿಗೆ ಶೇ 9.2ರಷ್ಟು ಬಡ್ಡಿ ದರ ಪ್ರಕಟಿಸಿದೆ.

Write A Comment