ಮುಂಬೈ

ಕಿಂಗ್‌ಫಿಷರ್‌ ಹೌಸ್‌ ಹರಾಜು ಬಿಡ್‌ಗಳಿಲ್ಲದೇ ಅಂತ್ಯ

Pinterest LinkedIn Tumblr

Mallayaಮುಂಬೈ (ಪಿಟಿಐ): ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಸ್ಥಿರಾಸ್ತಿ ಹರಾಜಿನ ಮೂಲಕ ಸಾಲ ವಸೂಲಾತಿಗೆ ಮುಂದಾಗಿದ್ದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ಗುರುವಾರ ಹಿನ್ನಡೆಯಾಗಿದೆ.
17 ಸಾವಿರ ಚದರ ಅಡಿ ವಿಸ್ತೀರ್ಣದ ಕಿಂಗ್‌ಫಿಷರ್‌ ಹೌಸ್‌ ಕಟ್ಟಡ ಹರಾಜು ಯಾವುದೇ ಬಿಡ್‌ಗಳಿಲ್ಲದೇ ಅಂತ್ಯಕಂಡಿದೆ. ಈ ಕಟ್ಟಡ ಒಂದು ಕಾಲದಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕೇಂದ್ರ ಕಚೇರಿಯಾಗಿತ್ತು.
ವಿಮಾನ ನಿಲ್ದಾಣಕ್ಕೆ ಸಮೀಪದ ವಿಲೆ ಪಾರ್ಲೆ ಪ್ರದೇಶದ ಈ ಆಸ್ತಿಯ ಹರಾಜು ಪ್ರಕ್ರಿಯೆ ಗುರುವಾರ ಬೆಳಿಗ್ಗೆ 11:30ಕ್ಕೆ ಆರಂಭಗೊಂಡು ಒಂದು ಗಂಟೆಯ ಕಾಲ ನಡೆಯಿತು. ಆದರೆ, ಯಾರೊಬ್ಬರೂ ಇದರ ಖರೀದಿಗೆ ಮುಂದಾಗಲಿಲ್ಲ.
‘ಯಾವುದೇ ಬಿಡ್‌ಗಳು ಸಲ್ಲಿಕೆಯಾಗಲಿಲ್ಲ. ಮೂಲಬೆಲೆ ಹೆಚ್ಚು ಇದ್ದಿದ್ದು ಈ ನಡೆಗೆ ಕಾರಣ ಇರಬಹುದು’ ಎಂದು ಅಧಿಕಾರಿಯೊಬ್ಹರು ತಿಳಿಸಿದರು.
ಹರಾಜಿನಲ್ಲಿ ಕಿಂಗ್‌ಫಿಷರ್ ಹೌಸ್‌ಗೆ 150 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಮಾಡಲಾಗಿತ್ತು. ಇದು ಬಿಡ್ಡರ್‌ಗಳಿಗೆ ಹೆಚ್ಚು ಅನಿಸಿರಬಹುದು ಎಂದೂ ಅವರು ನುಡಿದರು.
ಇನ್ನು, ಕಿಂಗ್‌ ಫಿಷರ್ ಏರ್‌ಲೈನ್ಸ್‌ಗೆ ಸಾಲಗಳನ್ನು ನೀಡಿದ್ದ 17 ಬ್ಯಾಂಕ್‌ಗಳ ಒಕ್ಕೂಟ ಪುನರ್ ಪರಿಶೀಲನಾ ಸಭೆ ನಡೆಸಲು ಹಾಗೂ ಕಟ್ಟಡದ ಮೂಲಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚಿಸಲು ನಿರ್ಧರಿಸಿವೆ ಎಂದು ಮೂಲಗಳು ಹೇಳಿವೆ.

Write A Comment