ಮನೋರಂಜನೆ

ಬಂಧಮುಕ್ತ ಮುನ್ನಾ ಭಾಯಿ ಸಂಜಯ್‌ ದತ್‌ ಕೈಯಲ್ಲಿದೆ ಏಳು ಸಿನಿಮಾ

Pinterest LinkedIn Tumblr

Sanjay Dutt1-700ಮುಂಬಯಿ: ಫೆ.25ರಂದು ಯೆರವಾಡಾ ಜೈಲಿನಿಂದ ಬಿಡುಗಡೆಗೊಂಡು ಮನೆಗೆ ಮರಳಿರುವ ಬಾಲಿವುಡ್‌ ಚಿತ್ರನಟ ಸಂಜಯ್‌ ದತ್‌ ಕೈಯಲ್ಲಿ ಈಗ ಕನಿಷ್ಠ ಏಳು ಸಿನೇಮಾಗಳಿವೆ.

ಆಮೀರ್‌ ಖಾನ್‌ ಅವರ “ಪೀಕೆ’ ಚಿತ್ರದಲ್ಲಿ ಕೊನೆಯ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದ ದತ್‌, ಈಗಿನ್ನು ಸೋಹಮ್‌ ಶಾ ಅವರ “ಶೇರ್‌’ ಚಿತ್ರದಲ್ಲಿ ನಟಿಸಲು ತೊಡಗುವ ಮೂಲಕ ಮತ್ತೆ ತಮ್ಮ ಚಿತ್ರ ಜೀವನವನ್ನು ಆರಂಭಿಸಲಿದ್ದಾರೆ.

ಮಾಧ್ಯಮ ವರದಿ ಪ್ರಕಾರ ಸಂಜಯ್‌ ದತ್‌ ಅವರು ಶಾ ಅವರ “ಶೇರ್‌’ ಚಿತ್ರವನ್ನು ಮೊತ್ತ ಮೊದಲಾಗಿ ಪೂರ್ಣಗೊಳಿಸಲಿದ್ದಾರೆ. ಈ ಚಿತ್ರದಲ್ಲಿ ಪಾಕ್‌ ನಟಿ ಹುಮೈಮಾ ಮಲಿಕ್‌ ಮತ್ತು ವಿವೇಕ್‌ ಒಬೆರಾಯ್‌ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ಸೋಹಮ್‌ ಶಾ ಅವರ “ಶೇರ್‌’ ಸಿನೇಮಾವನ್ನು ಮುಗಿಸಕೊಡುವುದಕ್ಕೆ ಸಂಜಯ್‌ ದತ್‌ ಬದ್ಧರಾಗಿದ್ದಾರೆ. ಏಕೆಂದರೆ ಈ ಚಿತ್ರ ಈಗ ಸಾಕಷ್ಟು ಸಮಯದಿಂದ ನಿಲುಗಡೆಗೆ ಗುರಿಯಾಗಿದ್ದು ಅಂತೆಯೇ ಸೋಹಮ್‌ ಅವರ ಚಿತ್ರ ಬದುಕು ಕೂಡ ಅದೇ ಸ್ಥಿತಿಯಲ್ಲಿ ನಿಂತಿದೆ. ಸಂಜಯ್‌ ದತ್‌ ಕೈಯಲ್ಲಿ ಇನ್ನೂ ಏಳು ಸಿನೇಮಾಗಳಿವೆ. ಆದರೆ ಇವುಗಳಲ್ಲಿ ಸಿದ್ಧಾರ್ಥ ಆನಂದ್‌ ಅವರ ಸಿನೇಮಾ ಒಳಗೊಂಡಿಲ್ಲ ಎಂದು ಮೂಲಗಳನ್ನು ಉಲ್ಲೇಖೀಸಿ ಡಿಎನ್‌ಎ ವರದಿ ಮಾಡಿದೆ.

ಇದೇ ವೇಳೆ ಸಂಜಯ್‌ ದತ್‌ಗೆ ಭಾರೀ ಹೆಸರು ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟಿದ್ದ ಮುನ್ನಾ ಭಾಯಿ ಸರಣಿ ಚಿತ್ರಗಳ ನಿರ್ಮಾಪಕ -ನಿರ್ದೇಶಕರು ಈ ಸರಣಿಯ ಹೊಸ ಚಿತ್ರದ ಯೋಜನೆಯನ್ನು ಹಾಕಿಕೊಂಡು ದತ್‌ ಅವರನ್ನು ಸಂಪರ್ಕಿಸಿದ್ದಾರೆ. ದತ್‌ ಅವರು ಬೆಳ್ಳಿ ತೆರೆಯಿಂದ ಇನ್ನಷ್ಟು ದೀರ್ಘ‌ ಕಾಲ ದೂರ ಉಳಿಯದೆ ಸಾಧ್ಯವಿರುವಷ್ಟು ಬೇಗನೆ ತನ್ನ ಸಿನೇಮಾ ಅಸ್ತಿತ್ವವನ್ನು ತೋರ್ಪಡಿಸುವ ತೀವ್ರ ಉತ್ಸುಕತೆಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014ರ ಮೇ ತಿಂಗಳಿಂದ ಪುಣೆಯ ಯೆರವಾಡ ಜೈಲಿನಲ್ಲಿ ಶಿಕ್ಷೆಯ ಅವಧಿಯನ್ನು ಕಳೆದಿರುವ ಸಂಜಯ್‌ ದತ್‌ ಅವರನ್ನು ಸನ್ನಡತೆಗಾಗಿ ಮುಂಬಯಿಯ ಆರ್ಥರ್‌ ರೋಡ್‌ ಜೈಲಿನಿಂದ 18 ತಿಂಗಳ ಮುನ್ನವೇ ಬಿಡುಗಡೆಗೊಳಿಸಲಾಗಿದೆ.

-ಉದಯವಾಣಿ

Write A Comment