ಮುಂಬೈ

ಚಿನ್ನದ ಧಾರಣೆ ₹695, ಬೆಳ್ಳಿ ₹965 ಇಳಿಕೆ

Pinterest LinkedIn Tumblr

goldwebಮುಂಬೈ (ಪಿಟಿಐ): ಕಳೆದ ಎರಡು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನ, ಬೆಳ್ಳಿ ಧಾರಣೆ ಸೋಮವಾರ ಮತ್ತೆ ಕುಸಿತ ಕಂಡಿದೆ.

ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನ ₹ 695 ಇಳಿಕೆ ಕಂಡು ₹28,415ರಲ್ಲಿ ವಹಿವಾಟು ನಡೆಸಿತು. ಬೆಳ್ಳಿ ಬೆಲೆಯೂ ಕೆ.ಜಿಗೆ ₹965 ಇಳಿದು, ₹37,210ರಲ್ಲಿ ಮಾರಾಟವಾಯಿತು.

ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ತಗ್ಗಿದ್ದು, ಚಿನ್ನಾಭರಣ ವರ್ತಕರಿಂದಲೂ ಖರೀದಿ ಕಡಿಮೆಯಾಗಿದೆ. ಚಿನ್ನದ ಬೆಲೆ ಇಳಿಯಲು ಇದು ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

99.5 ಶುದ್ಧತೆಯ ಸ್ಟ್ಯಾಂಡರ್ಡ್‌ ಚಿನ್ನ ₹28,415ರಲ್ಲಿ ಮಾರಾಟವಾದರೆ, 99.9 ಶುದ್ಧತೆಯ ಶುದ್ಧ ಚಿನ್ನ ₹28,565ರಲ್ಲಿ ವಹಿವಾಟು ಕಂಡಿತು.

Write A Comment