ಮುಂಬೈ

ಶಿನಾ ಬದುಕಿದ್ದಾಳೆ ಎಂದು ನಂಬಿಸಲು ಈ ಮೇಲ್ ಮಾಡಿದ್ದ ಇಂದ್ರಾಣಿ..!

Pinterest LinkedIn Tumblr

9sheena-bora-caseಮುಂಬೈ: ಶೀನಾ ಬೋರಾ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದಿನಕಳೆದಂತೆ ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕುತ್ತಿದ್ದಾರೆ.

ಸಿಬಿಐ ಮೂಲಗಳು ತಿಳಿಸಿರುವಂತೆ ಶಿನಾ ಬೋರಾ ಹತ್ಯೆ ಬಳಿಕ ಆಕೆಯ ತಾಯಿ ಇಂದ್ರಾಣಿ ಮುಖರ್ಜಿ ಶೀನಾಳ ಈ ಮೇಲ್ ಐಡಿಯಿಂದ ಪತಿ ಮತ್ತು ಶೀನಾಳ ತಂದೆ ಪೀಟರ್ ಮುಖರ್ಜಿಗೆ ಈ  ಮೇಲ್ ರವಾನಿಸುತ್ತಿದ್ದಳು ಎಂದು ತಿಳಿದುಬಂದಿದೆ. ಶೀನಾಳ ತಂದೆ ಪೀಟರ್ ಮುಖರ್ಜಿಗೆ ಶೀನಾ ಹತ್ಯೆಯ ಕುರಿತು ಯಾವುದೇ ರೀತಿಯಿಂದಲೂ ಶಂಕೆ ಬಾರದಿರಲಿ ಎಂದು ಇಂದ್ರಾಣಿ ಶೀನಾ  ಖಾತೆಯನ್ನು ಉಪಯೋಗಿಸಿ ಶೀನಾಳೆ ಬರೆಯುತ್ತಿದ್ದಂತೆ ಮೇಲ್ ರವಾನಿಸುತ್ತಿದ್ದಳು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಕಳೆದ ಗುರುವಾರ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿಯೂ ಈ ಬಗ್ಗೆ ಉಲ್ಲೇಖವಿದ್ದು, ಶೀನಾ ಹತ್ಯೆ ಬಳಿಕ ಇಂದ್ರಾಣಿ ಮುಖರ್ಜಿ ಆ ಹತ್ಯೆ ಯಾರಿಗೂ ತಿಳಿಯಬಾರದು  ಎಂದು ತನ್ನ ಪತಿಗೂ ಸೇರಿದಂತೆ ತನ್ನ ಸ್ನೇಹಿತರಿಗೆ ಈ ಮೇಲ್ ರವಾನಿಸುತ್ತಿದ್ದಳು. ಈ ಮೇಲ್ ನಲ್ಲಿ ಶೀನಾ ಕುರಿತು ಹಲುವು ಸುಳ್ಳು ಮಾಹಿತಿಗಳನ್ನು ತನ್ನ ಸ್ನೇಹಿತರೊಂದಿಗೆ  ಹಂಚಿಕೊಂಡಿದ್ದಾಳೆ. ಈಗಷ್ಟೇ ಶೀನಾಳೊಂದಿಗೆ ಮಾತನಾಡಿದೆ ಎಂದು ಹೇಳುವ ಮೂಲಕ ಶೀನಾ ಇನ್ನೂ ಬದುಕ್ಕಿದ್ದಾಳೆ ಎಂದು ನಂಬಿಸಲು ಇಂದ್ರಾಣಿ ಮುಖರ್ಜಿ ಪ್ರಯತ್ನಿಸುತ್ತಿದ್ದಳು. ಒಂದು  ಹಂತದಲ್ಲಿಯಂತೂ ಇಂದ್ರಾಣಿ ಶೀನಾ ಕುರಿತು ಅಗತ್ಯಕ್ಕಿಂತಲೂ ಹೆಚ್ಚಾಗಿ ಈ ಮೇಲ್ ನಲ್ಲಿ ಚರ್ಚಿಸಿರುವ ಕುರಿತು ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.

ಪೀಟರ್ ಮುಖರ್ಜಿಗೆ ಇಂದ್ರಾಣಿ ಶೀನಾ ಈ ಮೇಲ್ ಐಡಿ ಮೂಲಕ ಬರೆದಿರುವ ಈ ಮೇಲ್ ನ ಸಾರಾಂಶ ಸಿಬಿಐ ಮೂಲಗಳಿಂದ ಬಹಿರಂಗಗೊಂಡಿದ್ದು, “ಇದು ನಿಮಗೆ ಕೊಂಚ ವಿಲಕ್ಷಣ  ಎನಿಸಬಹುದು. ಆದರೆ ಸತ್ಯಾಂಶವೇನೆಂದರೆ ಇಂದ್ರಾಣಿ ನನ್ನ ಸಹೋದರಿಯೂ ಅಲ್ಲ ಅಥವಾ ನನ್ನ ತಾಯಿಯೂ ಅಲ್ಲ. ಇಂದ್ರಾಣಿ ಕೆಲ ವರ್ಷಗಳ ಹಿಂದೆ ನಮ್ಮ ಕುಟುಂಬ ಸೇರಿರುವ ಕೇವಲ  ಓರ್ವ ಒಳ್ಳೆಯ ಸಹಾಯಕಿ ಅಷ್ಟೇ” ಎಂದು ಇಂದ್ರಾಣಿ ಶೀನಾಳ ಹೆಸರಲ್ಲಿ ಪೀಟರ್ ಮುಖರ್ಜಿಗೆ ದಿನಾಂಕ 14, 2013ರಂದು ಬರೆದಿದ್ದಾಳೆ.

ಪ್ರಸ್ತುತ ಈ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಈ ಚಾರ್ಜ್ ಶೀಟ್ ಕುರಿತು ಪ್ರತಿಕ್ರಿಯಿಸಲು ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಪರ ವಕೀಲರು ನಿರಾಕರಿಸಿದ್ದು,  ಚಾರ್ಜ್ ಶೀಟ್ ಪ್ರತಿ ನಮಗೆ ದೊರೆತಿಲ್ಲ. ಪ್ರತಿ ದೊರೆತ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.

ಕಳೆದ ವಾರವಷ್ಟೇ ಶೀನಾ ಬೋರಾ ಹತ್ಯಾ ಪ್ರಕರಣ ಸಂಬಂಧ ಇಂದ್ರಾಣಿ ಪತಿ ಪೀಟರ್ ಮುಖರ್ಜಿ ವಿರುದ್ಧ ಸಿಬಿಐ ಅಧಿಕಾರಿಗಳು ಸಾಕ್ಷ್ಯ ನಾಶ ಆರೋಪ ಮತ್ತು ಕೊಲೆ ಆರೋಪ ದಾಖಲು  ಮಾಡಿಕೊಂಡು ಅವರನ್ನು ಬಂಧಿಸಿದ್ದರು.

Write A Comment