ಮುಂಬೈ, ಆ.26: ನಟ ಸಂಜಯ ದತ್‌ರ ಜೈಲು ವಾಸದ ಅವಧಿ ಅಂತ್ಯವಾಗಬಹುದೆಂದು ಇತ್ತೀಚೆಗೆ ಊಹಿಸಲಾಗಿತ್ತು.
ಆದರೆ, ಅದು ನಿಜವಾಗುವ ಲಕ್ಷಣ ಕಾಣಿಸು ತ್ತಿಲ್ಲ. ದತ್ ಪುನಃ 30 ದಿನಗಳ ಕಾಲ ಪೆರೋಲ್‌ನಲ್ಲಿ ಹೊರ ಬರಲಿದ್ದಾರೆಂದು ಬಾಲಿವುಡ್ ಲೈಫ್ ಡಾಟ್‌ಕಾಮ್ ವರದಿ ಮಾಡಿದೆ.
ತನ್ನ ಪುತ್ರಿಯ ಅನಾರೋಗ್ಯದ ಕಾರಣ ನೀಡಿ ಸಂಜಯ್ ಜೂನ್‌ನಲ್ಲಿ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ಅವರ ಈ ಬೇಡಿಕೆಯನ್ನು ಅಂಗೀಕರಿಸಲಾಗಿದ್ದು, ನಟ ಪುನಃ ಕಂಬಿಗಳ ಹಿಂದಿನಿಂದ ಹೊರ ಬರಲಿದ್ದಾರೆ.
30 ದಿನಗಳ ಪೆರೋಲನ್ನು ಮತ್ತೆ 60 ದಿನಗಳಿಗೆ ವಿಸ್ತರಿಸಲು ಸಾಧ್ಯವಿದೆ. ಹಾಗಾದಲ್ಲಿ, ಸಂಜಯ್ ಮುಂದಿನ 3 ತಿಂಗಳ ಕಾಲ ತಮ್ಮ ಕುಟುಂಬದೊಂದಿಗಿರಲಿದ್ದಾರೆಂದು ವರದಿಗಳು ತಿಳಿಸಿವೆ.