ಮುಂಬೈ: ಹೆಣ್ಣು ಮಕ್ಕಳಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಹೌದು ಅವರಿಗೆ ಬಂಗಾರವೆಂದರೆ ಬಲು ಪ್ರೀತಿ ನಿಜ. ಆದರೆ ಚಿನ್ನದ ಆಭರಣಗಳನ್ನು ಮೈಮೇಲೆ ಹಾಕಿಕೊಂಡು ಬೆಡಗು ಭಿನ್ನಾಣ ಪ್ರದರ್ಶಿಸಬೇಕಾದ ಈಕೆ ಮಾಡಿದ್ದೇನು ಗೊತ್ತಾ? ಇಡಬಾರದ ಜಾಗದಲ್ಲಿ ಚಿನ್ನ ಇಟ್ಟುಕೊಂಡು ಸಾಗಿಸುತ್ತಿದ್ದ ಈಕೆಯ ಸ್ಟೋರಿ ಓದಿ.
ಹೌದು ! ನಾವಂದುಕೊಂಡಂತೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ಆಭರಣಗಳನ್ನು ಧರಿಸಿ ವೈಯ್ಯಾರದಿಂದ ಹೋಗುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ಈಕೆಗೆ ಮಾತ್ರ ಬಂಗಾರದ ಮೇಲೆ ಅತಿಯಾದ ವ್ಯಾಮೋಹ. ಹಾಗಾಗಿ, ತನ್ನ ಒಳ ಉಡುಪಿನಲ್ಲಿ ಬರೋಬ್ಬರಿ 300 ಗ್ರಾಂ ಬಂಗಾರವನ್ನು ಬಚ್ಚಿಟ್ಟುಕೊಂಡು ಸಾಗಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾಳೆ.
ಕೇರಳ ಮೂಲದ ಈಕೆಯ ಹೆಸರು ರುಬಿನಾ. ಮುಂಬೈ ಏರ್ ಪೋರ್ಟ್‌ನಿಂದ ಬಂಗಾರವನ್ನು ಕದ್ದು ಸಾಗಿಸುತ್ತಿದ್ದ ಈ ಮಹಿಳೆಯ ಚಾಲಾಕಿತನ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.