ಮುಂಬಯಿ: ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬ ಮಹಿಳೆಯ ಎದುರು ಹಸ್ತಮೈಥುನ ಮಾಡಿಕೊಂಡು ಪರಾರಿಯಾಗಿರುವ ನಾಚಿಕೆಗೇಡಿನ ಘಟನೆ ದಕ್ಷಿಣ ಮುಂಬಯಿಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯ ಈ ಲಜ್ಜೆಗೆಟ್ಟ ಲೈಂಗಿಕ ಕ್ರಿಯೆಯನ್ನು ಕಂಡ ವೃತ್ತಿಪರ ಲೇಖಕಿ ಮರಿಯಾನಾ ಆಬ್‌ಡೋ ಅವರು, ಆ ವ್ಯಕ್ತಿಯ ನಿರ್ಲಜ್ಜ ಕ್ರಿಯೆಯನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಆ ವ್ಯಕ್ತಿಯ ಫೋಟೋವನ್ನು ಟ್ವಿಟರ್ ನಲ್ಲಿ ಹಾಕುವ ಮೂಲಕ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರಿಗೆ ನೆರವಾಗಿದ್ದಾರೆ.
ಮರಿಯಾನಾ ಆಬ್‌ಡೋ ಎದುರು ಹಸ್ತಮೈಥುನ ನಡೆಸಿದ ವ್ಯಕ್ತಿಯು ಪರಾರಿಯಾಗುವ ಮುನ್ನ ಆತನನ್ನು ಹಿಡಿಯುವಲ್ಲಿ ಇಬ್ಬರು ದಾರಿಹೋಕರು ಧಾವಿಸಿ ಬಂದರೂ ಅವರಿಗೆ ಆತನನ್ನು ಹಿಡಿಯಲಾಗಲಿಲ್ಲ.
ಇನ್ನೂ ಮರಿಯಾನಾ ಅವರ ಟ್ವಿಟರ್ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಾರ್ಯಾಲಯವು ಆರೋಪಿಯ ಬಂಧನಕ್ಕೆ ಕಾರ್ಯಾಚರಿಸುವಂತೆ ಪೊಲೀಸರಿಗೆ ಸೂಚಿಸಿದೆ. ಮರಿಯಾನಾ ಅವರ ಟ್ವಿಟ್‌ಗೆ ಅನೇಕ ಟ್ವಿಟರ್ ಬಳಕೆದಾರರು ಆಘಾತ ಹಾಗೂ ಜಿಗುಪ್ಸೆ ವ್ಯಕ್ತಪಡಿಸಿದ್ದಾರೆ.