ಮುಂಬೈ: ನಿರಂತರ ಪ್ರತಿಭಟನೆ ನಡೆಸಿ ಸಂಸತ್ ಅಧಿವೇಶನವನ್ನು ವ್ಯರ್ಥ ಮಾಡಿದ ಕಾಂಗ್ರೆಸ್ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.
ಕೇವಲ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸುವುದರಿಂದ ಉದ್ದೇಶ ಈಡೇರುವುದಿದ್ದರೆ ಈ ವೇಳೆಗೆ ಭಾರತಕ್ಕೆ ಬೇಕಿರುವ ಬೇಕಿರುವ ಬಹುತೇಕ ಪಾಕಿಸ್ತಾನ ಭಯೋತ್ಪಾದಕರು ಸಿಗಬೇಕಿತ್ತು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ಪ್ರತಿಭಟನೆಯಿಂದಾಗಿ ಪ್ರಮುಖ ಮಸೂದೆಗಳು ಅಂಗೀಕಾರ ಮುಂಗಾರು ಅಧಿವೇಶನ ಮುಕ್ತಾಯಗೊಂಡಿರುವುದರಿಂದ ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.
ಒಬ್ಬ ಲಲಿತ್ ಮೋದಿ ಬಂಧನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ತೆರಿಗೆದಾರರ ಹಣ ಪೋಲು ಮಾಡುವುದರೊಂದಿಗೆ ಭದ್ರತಾ ವಿಷಯಗಳ ಬಗೆಗಿನ ಚರ್ಚೆಯ ನಡೆಯದಂತೆ ಮಾಡಿದೆ. ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಿ ಲಲಿತ್ ಮೋದಿ ಅವರನ್ನು ಬಂಧಿಸುವಂತೆ ರಾಹುಲ್ ಗಾಂಧಿ ಆಗ್ರಹಿಸುತ್ತಿದ್ದಾರೆ. ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸುವುದರಿಂದ ಉದ್ದೇಶ ಈಡೇರುವುದಿದ್ದರೆ ಈ ವೇಳೆಗೆ ಪಾಕಿಸ್ತಾನದಿಂದ ಬಹುತೇಕ ಭಯೋತ್ಪಾದಕರು ಭಾರತದಲ್ಲಿ ಸೇರೆಯಲ್ಲಿರುತ್ತಿದ್ದರು ಎಂಬುದನ್ನು ತಿಳಿಯಲಿ ಎಂದು ಶಿವಸೇನೆ ಹೇಳಿದೆ.
ಲಲಿತ್ ಮೋದಿ ಐಪಿಎಲ್ ನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ, ರಾಹುಲ್ ಗಾಂಧಿ ಲಲಿತ್ ಮೋದಿ ವಿರುದ್ಧ ಕಪ್ಪು ಹಣ ಹೊಂದಿರುವ ಆರೋಪ ಮಾಡಿದ್ದಾರೆ. ಐಪಿಎಲ್ ಪ್ರಾರಂಭವಾಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ, ಆದ್ದರಿಂದ ಇಂದು ಆರೋಪ ಮಾಡುತ್ತಿರುವವರೇ ಅಪರಾಧದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ರಾಹುಲ್ ವಿರುದ್ಧ ಶಿವಸೇನೆ ವ್ಯಂಗ್ಯವಾಡಿದೆ.