ಮುಂಬೈ

ಮ್ಯಾಗಿ ನಿಷೇಧ ತೆರವುಗೊಳಿಸಿ, ಷರತ್ತು ವಿಧಿಸಿದ ಹೈಕೋರ್ಟ್

Pinterest LinkedIn Tumblr

maggi13ಮುಂಬೈ: ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಮ್ಯಾಗಿ ಮೇಲೆ ಹೇರಲಾಗಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್ ತೆರವುಗೊಳಿಸಿದೆ.

ಮಾರುಕಟ್ಟೆಯಲ್ಲಿರುವ ಮ್ಯಾಗಿ ಸೇರಿದಂತೆ ನೆಸ್ಟ್ಲೆಯ 9 ವಿವಿಧ ಉತ್ಪನ್ನಗಳನ್ನು ಹಿಂಪಡೆಯಬೇಕೆಂಬ ಎಫ್ಎಸ್ಎಸ್ಎಐ ಆದೇಶವನ್ನು ರದ್ದುಗೊಳಿಸುವಂತೆ ನೆಸ್ಟ್ಲೆ ಇಂಡಿಯಾ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿರುವ ಹೈಕೋರ್ಟ್, ಮ್ಯಾಗಿ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಿ, ಕೆಲವು ಷರತ್ತುಗಳನ್ನು ವಿಧಿಸಿದೆ.

ಲ್ಯಾಬ್ ನಲ್ಲಿ ಮತ್ತೆ ಹೊಸದಾಗಿ ಮ್ಯಾಗಿ ನೂಡಲ್ಸ್ ಪರೀಕ್ಷೆ ನಡೆಸಬೇಕು ಎಂದು ಆದೇಶ ಹೊರಡಿಸಿದೆ. ಲ್ಯಾಬ್ ನಲ್ಲಿ ಮ್ಯಾಗಿ ನೂಡಲ್ಸ್ ನ 5 ಮಾದರಿಗಳ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದ್ದು, ಪರೀಕ್ಷೆ ನಡೆಸಲು ಆರು ವಾರಗಳ ಗಡುವು ನೀಡಿದೆ.

ಅಲ್ಲದೇ, ಲ್ಯಾಬ್ ಪರೀಕ್ಷೆ ವರದಿ ಬರುವವರೆಗೆ ಮ್ಯಾಗಿ ಮಾರಾಟ, ಉತ್ಪಾದನೆಗೆ ನಿರ್ಬಂಧ ಹೇರಿರುವ ಹೈಕೋರ್ಟ್, ಮ್ಯಾಗಿ ಉತ್ಪಾದನೆ ಹಾಗೂ ಮಾರಾಟ ಮಾಡುವಂತಿಲ್ಲ ಎಂದು ನೆಸ್ಲೆ ಕಂಪನಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಮ್ಯಾಗಿ ನಿಷೇಧ ಮಾಡಿದ್ದು ಸಹಜ ನ್ಯಾಯ ಪ್ರಕ್ರಿಯೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿದೆ.

ನೆಸ್ಲೆ ಇಂಡಿಯಾ ಕಂಪನಿಯ ಎಲ್ಲಾ ತರಹದ ಮ್ಯಾಗಿ ನೂಡಲ್ಸ್ ಗಳು ಮನುಷ್ಯನ ಸೇವನೆಗೆ ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಹೇಳಿ ಅವುಗಳ ಮಾರಾಟಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಳೆದ ವಾರ ನಿಷೇಧ ಹೇರಿತ್ತು. ‘2 ಮಿನಿಟ್ ಮ್ಯಾಗಿ’ಯಲ್ಲಿ ಅದರ ರುಚಿ ಹೆಚ್ಚಿಸುವ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸತುವಿನ ಪ್ರಮಾಣ ಅನುಮತಿ ಮಟ್ಟಕ್ಕಿಂತ ಜಾಸ್ತಿಯಾಗಿದೆ ಎಂದು ಹೇಳಿ ಅವುಗಳ ಮಾರಾಟವನ್ನು ನಿಷೇಧಿಸಲಾಗಿತ್ತು.

Write A Comment