ಮುಂಬೈ: ವಿವಿಧ ಹೋಟೆಲ್ ಹಾಗೂ ರೆಸಾರ್ಟ್ ಗಳ ಮೇಲೆ ಮುಂಬೈನ ಮಾಲ್ವಾನಿ ಠಾಣಾ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸಿಕ್ಕಿ ಬಿದ್ದ 40 ಜೋಡಿಗಳ ಪೈಕಿ ಬಹುತೇಕರು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಾಗಿದ್ದಾರೆ.
ದಾಳಿ ವೇಳೆ ಸಿಕ್ಕಿ ಬಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪೋಷಕರುಗಳಿಗೆ ಪೊಲೀಸರು ಫೋನ್ ಮಾಡಿ ವಿಷಯ ತಿಳಿಸಿದ್ದು, ಬಳಿಕ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದರೆಂದು ಕೇಸ್ ದಾಖಲಿಸಿ ತಲಾ 1,200 ರು. ದಂಡ ವಿಧಿಸಿ ಬಿಟ್ಟು ಕಳುಹಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ಈಗ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಏಕಾಂತ ಬಯಸಿ ಅವರುಗಳು ಹೋಗಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಲಾಗುತ್ತಿದೆ. ತಮ್ಮ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ ಕಾರಣ ಘಾಸಿಗೊಂಡಿರುವ ಆನೇಕ ವಿದ್ಯಾರ್ಥಿನಿಯರು ಈಗ ತಮಗೆ ಆತ್ಮಹತ್ಯೆಯೊಂದೇ ದಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಪೊಲೀಸರ ಕ್ರಮಕ್ಕೆ ಬೆಂಬಲವೂ ವ್ಯಕ್ತವಾಗಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಸ್ಪರ ಮಾತನಾಡಬೇಕೆಂದರೇ ಕಾಲೇಜ್ ಕ್ಯಾಂಪಸ್ ನಲ್ಲಿಯೇ ಅದನ್ನು ಮಾಡಬಹುದು. ಹೋಟೆಲ್ ಕೋಣೆಯಲ್ಲಿ ಅಲ್ಲವೆಂದು ಕೆಲವರು ವಾದಿಸಿದ್ದಾರೆ.