ಮುಂಬೈ

ಕಂಗನಾ ಒಬ್ಬ ಅದ್ಭುತ ಕಲಾವಿದೆ: ಸೀನಿಯರ್ ಬಚ್ಚನ್

Pinterest LinkedIn Tumblr

Amitabh-kangana-ranautಮುಂಬೈ: “ತನು ವೆಡ್ಸ್ ಮನು ರಿಟರ್ನ್ಸ್”ನ ಬಾಲಿವುಡ್ “ಕ್ವೀನ್” ಕಂಗನಾ ರಾನತ್ ಒಬ್ಬ ಪ್ರತಿಭಾನ್ವಿತೆ ಹಾಗೂ ಅದ್ಭುತ ನಟಿ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಡಿ ಹೊಗಳಿದ್ದಾರೆ.

ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಮುಂದಿನ ಚಿತ್ರದಲ್ಲಿ ಈ ಇಬ್ಬರೂ ಕಲಾವಿದರು ಒಟ್ಟಿಗೆ ನಟಿಸಲಿದ್ದಾರೆ.” ಹಿರಾನಿ ನಿರ್ದೇಶನದಲ್ಲಿ ಕಂಗನಾ  ಜೊತೆಗೆ ನಟಿಸುತ್ತಿರುವುದಕ್ಕೆ ನಾನು ಬಹಳ ಪುಳಕಗೊಂಡಿದ್ದೇನೆ ಎಂದು ಸೀನಿಯರ್ ಬಚ್ಚನ್ ತಮ್ಮ ಟ್ವಿಟ್ಟರ್ ಪುಟದಲ್ಲಿ ಶೂಟಿಂಗ್ ದೃಶ್ಯದ ಫೋಟೋಗಳನ್ನು ಹಾಕಿ  ಖುಷಿ ಹಂಚಿಕೊಂಡಿದ್ದಾರೆ.

ಜಾಹೀರಾತುವೊಂದಕ್ಕೆ ನಕಲಿ ಗಡ್ಡ ಬಿಟ್ಟಿರುವ ಬಚ್ಚನ್, ಗಡ್ಡ ಅಂಟಿಸಿಕೊಂಡು ಅಭಿನಯಿಸುವುದು ಆರಂಭದಲ್ಲಿ ದೊಡ್ಡ ಹಿಂಸೆ ಎನಿಸಿದರೂ ಎಲ್ಲಾ ಮುಗಿದ ಮೇಲೆ ತೆರೆಯ ಮೇಲೆ ನೋಡಿದಾಗ, ಪಟ್ಟ ಶ್ರಮ ಸಾರ್ಥಕ ಎನಿಸುತ್ತದೆ ಎಂದು 72 ವರ್ಷದ ಈ ಹಿರಿಯ ನಟ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Write A Comment