ಮುಂಬೈ

ದೇಶದ ಅತಿದೊಡ್ಡ ಬ್ಯಾಂಕ್ ವಿರುದ್ಧ ಕೇಸ್ ದಾಖಲಿಸಿ ಗೆದ್ದ ಟೀ ವ್ಯಾಪಾರಿ

Pinterest LinkedIn Tumblr

ban

ಮುಂಬೈ: ಕೇವಲ 5 ನೇ ತರಗತಿಯವರೆಗೆ ಓದಿರುವ ಸಕ್ರೆ ಎಂಬ ಬಡ ಟೀ ವ್ಯಾಪಾರಿ ವ್ಯಕ್ತಿ ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ, ಸರಕಾರಿ ಒಡೆತನದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಿ, ನ್ಯಾಯಕ್ಕಾಗಿ ಹೋರಾಡಿ ಗೆಲುವು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಕಷ್ಟಪಟ್ಟು ದುಡಿದು ತನ್ನ ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟಿದ್ದ ಹಣದಲ್ಲಿ 9,200ರೂಪಾಯಿಗಳು ಅಚಾನಕ್ ಆಗಿ ಕಾಣಿಸದಾದ ಕಾರಣಕ್ಕೆ 2011ರಲ್ಲಿ ಆತ ಪ್ರಕರಣವನ್ನು ದಾಖಲಿಸಿದ್ದ.

ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಆತನ ಖಾತೆಯಲ್ಲಿ 20,000 ರೂಪಾಯಿಗಳಿದ್ದು, ಅದರಲ್ಲಿ ಆತ  10,800 ರೂಪಾಯಿಗಳನ್ನು ತೆಗೆದಿದ್ದ. ಮತ್ತೊಮ್ಮೆ ಹಣ ತೆಗೆಯಲು ಹೋದಾಗ ಆತನ ಖಾತೆಯಲ್ಲಿ ಶೂನ್ಯ ಮೊತ್ತ ಕಾಣಿಸುತ್ತಿತ್ತು. ಇದರಿಂದ ದಂಗಾಗಿ ಹೋದ ಬಡ ಸಕ್ರೆ ಹತ್ತಿರದ ಎಸ್‌ಬಿಐ ಖಾತೆಗೆ ಹೋಗಿ ತನ್ನ ಸಮಸ್ಯೆಯ ಬಗ್ಗೆ ದೂರಿದ. ಆದರೆ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ ತೋರಿದ ಅಧಿಕಾರಿಗಳು ಆತನದೇ ತಪ್ಪು ಎಂಬಂತೆ ನಡೆದುಕೊಂಡರು.

ಹೀಗಾಗಿ ಆತ  ಮುಂಬೈನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಗೆ ಮನವಿ ಮಾಡಿದ. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ.

ಆದರೆ ತಾವು ಬೆವರು ಸುರಿಸಿ ಗಳಿಸದ ಹಣವನ್ನು ವೃಥಾ ಕೈಚೆಲ್ಲಲು ಬಯಸದ ಆತ ಕೊನೆಯ ಆಯ್ಕೆಯಾಗಿ ಜಿಲ್ಲಾ ಗ್ರಾಹಕ ಸಮಸ್ಯೆ ನಿವಾರಣಾ ವೇದಿಕೆಯ ಮೆಟ್ಟಿಲೇರಿದ.

ಪ್ರಕರಣದ ಕುರಿತು ವಾದ ನಡೆಸಲು ವಕೀಲರನ್ನು ನೇಮಿಸಲು ಆತನ ಬಳಿ ಹಣವಿರಲಿಲ್ಲ. ಹೀಗಾಗಿ ಆತ ಸ್ವತಃ ತಾನೇ ವಾದ ನಡೆಸಲು ನಿಂತ.

ಸಕ್ರೆ ತಾನು ಕಳೆದುಕೊಂಡಿದ್ದೇನೆ ಎಂದು ಹೇಳುತ್ತಿರುವ ಹಣವನ್ನು ಸ್ವತಃ ತಾನೇ ಎಟಿಎಂ ಮೂಲಕ ತೆಗೆದಿದ್ದಾನೆ ಎಂದು  ಬ್ಯಾಂಕ್ ಕಡೆಯವರು ವಾದಿಸಿದರು. ಆದರೆ ಅದನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಗಳು ಅವರ ಬಳಿ ಇರಲಿಲ್ಲ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಒದಗಿಸುವಲ್ಲಿ ಸಹ ಬ್ಯಾಂಕ್ ವಿಫಲವಾಯಿತು.

ಸುಮಾರು 12 ಬಾರಿ ಬಾರಿ ಈ ಪ್ರಕರಣದ ವಿಚಾರಣೆ ನಡೆದ ಬಳಿಕ ಬಡ ವ್ಯಾಪಾರಿ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದ.

Write A Comment