ಮನೋರಂಜನೆ

ನಿರ್ದೇಶಕನ ಕೆನ್ನೆಗೆ ಬಾರಿಸಿದ ರಾಖಿ ಗೆಳತಿ

Pinterest LinkedIn Tumblr

rakhi-story

ಮುಂಬೈ: ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತಿ ಪಡೆದಿದ್ದ ಐಟಂ ಗರ್ಲ್ ರಾಖಿ ಸಾವಂತ್ ಇದೀಗ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ರಾಖಿ ಸ್ನೇಹಿತೆ ಮನಿಶಾ ಎಂಬಾಕೆ, ನಿರ್ದೇಶಕ ಸಚೇಂದ್ರ ಶರ್ಮಾ ಕನ್ನೆಗೆ ಬಾರಿಸಿದ್ದು, ಇದಕ್ಕೆ ರಾಖಿ ಸಾತ್ ನೀಡಿದ್ದಾಳೆ.

‘ಮುಂಬೈ ಕಾನ್ಟ್ ಡಾನ್ಸ್ ಸಾಲಾ’ ಎಂಬ ಚಿತ್ರದಲ್ಲಿ ರಾಖಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ನಿನ್ನೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ರಾಖಿ ಆಕೆಯ ಗೆಳತಿ ಮನಿಶಾ ಎಂಬಾಕೆಯನ್ನು ಸಮಾರಂಭಕ್ಕೆ ಕರೆತಂದಿದ್ದಾಳೆ.

ಈ ವೇಳೆ ನಿರ್ದೇಶಕ ಮನಿಶಾಳನ್ನು ನೀನು ನಾನು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡರೆ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ನನ್ನ ಜೊತೆ ಬಾ (ಕಾಸ್ಟಿಂಗ್ ಕೋಚ್) ಎಂದು ಆತ ಹೇಳಿದ್ದ ಎಂದು ಆರೋಪಿಸಿರುವ ರಾಖಿ ಗೆಳತಿ ಮನಿಶಾ ಸಮಾರಂಭದಲ್ಲಿ ವೇದಿಕೆಯಲ್ಲೇ ನಿರ್ದೇಶಕನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ತದನಂತರ ನಿರ್ದೇಶಕನೂ ಮನಿಶಾ ಕೆನ್ನೆಗೆ ಕಪಾಳ ಮೋಕ್ಷ ಮಾಡಿದ್ದಾನೆ.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲೇ ನಿರ್ದೇಶಕನ ಪಕ್ಕದಲ್ಲಿದ್ದ ರಾಖಿ ಕೂಡ ವಿಷಯ ತಿಳಿದು ತನ್ನ ಸ್ನೇಹಿತೆಗೆ ಸಾತ್ ನೀಡಿದ್ದಾಳೆ. ನಂತರ ಪ್ರಕರಣ ಕುರಿತು ಮಾತನಾಡಿದ ನಟಿ ರಾಖಿ ಸಾವಂತ್ ಘಟನೆಯ ಹಿಂದೆ ರಾಜಕೀಯ ಪಿತೂರಿ ಇದ್ದು, ತಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಘಟನೆ ಬಳಿಕ ರಾಖಿ ಹಾಗೂ ಆಕೆಯ ಸ್ನೇಹಿತೆ ಮನಿಶಾ ಇಬ್ಬರೂ ಸೇರಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಹೋಗಿ ನಿರ್ದೇಶಕನ ವಿರುದ್ಧ ದೂರು ನೀಡಿದ್ದಾರೆ.

Write A Comment