ಕರ್ನಾಟಕ

ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಮಕ್ಕಳೊಂದಿಗೆ ತಂದೆಯ ಆತ್ಮಹತ್ಯೆ

Pinterest LinkedIn Tumblr


ಬೆಳಗಾವಿ/ಚಿಕ್ಕೋಡಿ : ಪತ್ನಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಇಬ್ಬರು ಮಕ್ಕಳ ಜೊತೆಗೆ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದಲ್ಲಿ ನಡೆದಿದೆ.

ತಮ್ಮಣ್ಣ ಗಿಡ್ಡಾಳೆ (35), ಚಿನ್ನು (2), ನಿರಂಜನ್ (10) ಮೃತ ದುರ್ದೈವಿಗಳು. ಹೆಂಡತಿ ಜೊತೆ ಕೌಟುಂಬಿಕ ಕಲಹ ನಡೆದ ಹಿನ್ನೆಲೆಯಲ್ಲಿ ವ್ಯಕ್ತಿ ಮನನೊಂದು ತಾನು ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದ ಪತ್ನಿಯನ್ನ ಮನವೊಲಿಸಲು ತಮ್ಮಣ್ಣ ನಿನ್ನೆ ಹೆಂಡತಿಯ ತವರು ಮನೆ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮಕ್ಕೆ ಹೋಗಿದ್ದನು.

ಈ ಸಂದರ್ಭದಲ್ಲಿ ಪತ್ನಿಯ ತವರು ಮನೆಯವರು ತಮ್ಮಣ್ಣನನ್ನು ಅವಮಾನ ಮಾಡಿ ಕಳಿಸಿದ್ದರು ಈ ಹಿನ್ನೆಲೆಯಲ್ಲಿ ರಾತ್ರಿ ತಾನು ವಿಷ ಕುಡಿದು ಮಕ್ಕಳಿಗೂ ಉಣಿಸಿ ತಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ, ಎಸ್ ಐ ಶಿವಾನಂದ್ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Comments are closed.