ಕರ್ನಾಟಕ

ಮೃತ ಸೋಂಕಿತನ ಅಂತ್ಯಸಂಸ್ಕಾರ : ಪಿಎಫ್ಐ ಕಾರ್ಯಕರ್ತರಿಗೆ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಥ್..!

Pinterest LinkedIn Tumblr


ಚಾಮರಾಜನಗರ: ಕೊರೊನಾ ಸೋಂಕಿತ ವ್ಯಕ್ತಿಯೋರ್ವನ ಅಂತ್ಯಸಂಸ್ಕಾರದಲ್ಲಿ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್ ಇಂದು ಪಾಲ್ಗೊಂಡು ಪಿಎಫ್ಐ ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ಚಾಮರಾಜನಗರದ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಕೊಳ್ಳೇಗಾಲ ತಾಲೂಕಿನ ಬಸ್ತೀಪುರದ 60 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ‌. ಇವರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ಗುರುತಿಸಿರುವ ಭೂಮಿಯಲ್ಲಿ ಮಾಡಲು ಪಿಎಫ್ಐ ಕಾರ್ಯಕರ್ತರು ಹೊರಟು‌ ನಿಂತಾಗ ಇವರೊಟ್ಟಿಗೆ ಎಡಿಸಿಯೂ ಪಿಪಿಇ ಕಿಟ್ ಧರಿಸಿ ಜೊತೆಗೂಡಿ ಅಂತಿಮವಿಧಾನ ನೆರವೇರಿಸಿದ್ದಾರೆ.

ಈಗಾಗಲೇ ಐವರು ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಪಿಎಫ್ಐ ಕಾರ್ಯಕರ್ತರು ಗೌರವಯುತವಾಗಿ ನಡೆಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಇವರ ಕಾರ್ಯ ಕಂಡು ಮುಸ್ಲಿಂ ಸಮುದಾಯದ ಕೊರೊನಾ ಸೋಂಕಿತರು ಮೃತಪಟ್ಟರೆ ಸಮುದಾಯದ ಖಬರ್ ಸ್ತಾನದಲ್ಲೇ ವಿಧಿವಿಧಾನ ನೆರವೇರಿಸಿಲು ಆಯಾ ಭಾಗದ ಮುಖಂಡರು ಸಹಕರಿಸಬೇಕೆಂದು ಸೂಚಿಸಿತ್ತು.

Comments are closed.