ಕರ್ನಾಟಕ

ರಾಜ್ಯದಲ್ಲಿ ಇಂದು (ರವಿವಾರ) 4,120 ಕೊರೋನಾ ಪ್ರಕರಣಗಳು ಪತ್ತೆ: 91 ಮಂದಿ ಸಾವು

Pinterest LinkedIn Tumblr


ಬೆಂಗಳೂರು(ಜು.19): ರಾಜ್ಯದಲ್ಲಿ ಮಾರಕ ಕೊರೋನಾ ಹಾವಳಿ ಮುಂದುವರೆದಿದೆ. ಇದರ ಪರಿಣಾಮ ಇಂದು 4,120 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆಯೂ 63 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಒಟ್ಟು, 63,772 ಮಂದಿ ಪೈಕಿ 23,065 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ಧಾರೆ. ಸದ್ಯ 39,370 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಈ ಮಾರಕ ಕೊರೋನಾಗೆ ಇಂದು ಒಂದೇ ದಿನ 91 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್​-19 ಮೃತರ ಸಂಖ್ಯೆಯೂ 1331ಕ್ಕೆ ಏರಿಕೆಯಾಗಿದೆ.

ಇನ್ನು, ಬೆಂಗಳೂರುವೊಂದರಲ್ಲೇ 2,156 ಮಂದಿಗೆ ಕೊರೋನಾ ಬಂದಿದೆ. ಇದುವರೆಗೂ 24,316 ಕೊರೋನಾ ಪಾಸಿಟಿವ್​​​ ಕೇಸುಗಳು ವರದಿಯಾಗಿವೆ. ಜತೆಗೆ ರಾಜಧಾನಿಯಲ್ಲಿ ಮಾತ್ರ ಮಾರಕ ಕೊರೋನಾಗೆ 36 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಇಂದು 1,290 ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಇದರಲ್ಲಿ ಬೆಂಗಳೂರಿನ 253 ಕೋವಿಡ್​​-19 ರೋಗಿಗಳ ಇದ್ದಾರೆ.

ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇದುವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 10,77,618ಕ್ಕೆ ಏರಿಕೆಯಾಗಿದೆ. ಡೆಡ್ಲಿ ಕೊರೋನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 26,816 ಆಗಿದೆ.

ಹೀಗೆ ಕೊರೋನಾ ಸೋಂಕು ಮಿತಿಮೀರಿ ಹರಡುತ್ತಿರುವ ಕಾರಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡಲಾಗಿದೆ. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜುಲೈ 14ನೇ ತಾರೀಕು ಮಂಗಳವಾರ ರಾತ್ರಿ 8 ಗಂಟೆಯಿಂದಲೇ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.

ಇದನ್ನೂ ಓದಿ: ‘ಕೋವಿಡ್​​-19, ಚೀನಾ ಗಡಿ ವಿವಾದ, ಜಿಡಿಪಿ ವಿಚಾರದಲ್ಲಿ ಸುಳ್ಳು ಹೇಳುತ್ತಿರುವ ಬಿಜೆಪಿ‘ – ರಾಹುಲ್​​ ಗಾಂಧಿಇನ್ನು, ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಅಧಿಕೃತ ಆದೇಶ ಪ್ರತಿಯಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೊರೋನಾ ವೈರಸ್​​ ತಹಬದಿಗೆ ತರಲು ಈ ಲಾಕ್​ಡೌನ್​​ ಸಂದರ್ಭದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್​​ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Comments are closed.