ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆಯಾದರೂ ಅವೆಲ್ಲವನ್ನು ನಿಭಾಯಿಸಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇ ನಮ್ಮೆಲ್ಲರ ಗುರಿ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಜೊತೆಗೆ ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು ಎಂದು ಸಲಹೆ ನೀಡಿದರು.
ಮೋದಿ, ಶಾ ಇಬ್ಬರೂ ಸೇರಿ ಇಡೀ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ.ಅದಕ್ಕಾಗಿಯೇ ದೇಶದಲ್ಲಿ ಕೆಟ್ಟಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.ಇಡೀ ದೇಶದಲ್ಲಿ ಕೊರೊನಾ ಹೆಚ್ಚಲು ಮೋದಿ, ಶಾ ಇಬ್ಬರೇ ಕಾರಣ.ವಿರೋಧ ಪಕ್ಷದವರ ಮಾತನ್ನು ಕೇಳುವುದಿಲ್ಲ. ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷ ಬೆಳೆಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಮೋದಿ, ಶಾರನ್ನು ವೈಭವೀಕರಿಸುವುದರ ಹಿಂದೆ ಆರ್.ಎಸ್.ಎಸ್. ಇದೆ. ಸಂಘಪರಿವಾರನ್ನು ಎಲ್ಲಿಯವರೆಗೆ ಬಗ್ಗು ಬಡಿಯುವುದಿಲ್ಲವೋ ಅಲ್ಲಿಯವೆಗೆ ಯುವಕರಿಗೆ ಭವಿಷ್ಯವಿಲ್ಲ.ಈಗಂತೂ ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ. ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರನ್ನು ತೆಗಳುವುದನ್ನೇ ಬಿಜೆಪಿಯವರು ಕೆಲಸ ಮಾಡಿಕೊಂಡಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.
ಕಾಂಗ್ರೆಸ್ ಗೆ ಭದ್ರ ಬುನಾದಿಹಾಕಿದ್ದು ಹಿರಿಯರು.ನೀವೆಲ್ಲರೂ ಕಾಂಗ್ರೆಸ್ಸಿಗರು ಅಂತ ಎದೆ ತಟ್ಟಿ ಹೇಳಿಕೊಳ್ಳಿ,ಬಿಜೆಪಿ ಕಷ್ಟಪಡದೆ ಅಧಿಕಾರಕ್ಕೆ ಬಂದಿದೆ.ರಾಷ್ಟ್ರಭಕ್ತಿ, ದೇಶ ಪ್ರೇಮ ಎಂದು ಮುನ್ನಲೆಗೆ ಬಂದವರು. ನಿಜವಾದ ರಾಷ್ಟ್ರ ಭಕ್ತರು, ರಾಷ್ಟ್ರ ಪ್ರೇಮಿಗಳು ನಾವು. ಬಿಜೆಪಿಯವರು ಮುಗ್ಧ ಯೋಧರ ಶವದ ಮೇಲೆ ರಾಜಕೀಯ ಮಾಡುತ್ತಿದ್ದಾರೆ.ಬಿಜೆಪಿಯ ದುರಾಡಳಿತ ತೊಲಗಿಸಬೇಕು ಎಂದು ಮಲ್ಲಿಕಾರ್ಜು ಖರ್ಗೆ ಹೇಳಿದರು.
Comments are closed.