ಕರ್ನಾಟಕ

ಆರೋಪಿಗೆ ಕೊರೋನಾ: ಡಿವೈಎಸ್ಪಿ ಸೇರಿ ಮುಳುಬಾಗಿಲು ಪೊಲೀಸ್ ಠಾಣೆಯ 22 ಸಿಬ್ಬಂದಿಗೆ ಹೋಂ ಕ್ವಾರಂಟೈನ್

Pinterest LinkedIn Tumblr


ಕೋಲಾರ (ಜೂ. 16): ಕೊರೋನಾ ಮಹಾಮಾರಿಯ ವಿರುದ್ದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್​ಗೆ ಕೋಲಾರ ಜಿಲ್ಲೆಯಲ್ಲಿ ಸೋಂಕಿನ ಭೀತಿ ಎದುರಾಗಿದೆ. ಜಿಲ್ಲೆಯ ಮುಳಬಾಗಿಲು ನಗರ ಠಾಣೆ ಪೊಲೀಸರು ಕಳೆದ ವಾರದ ಹಿಂದಷ್ಟೆ ಪತಿಯ ವರದಕ್ಷಿಣೆ ಕಿರುಕುಳದಿಂದ ಪತ್ನಿ ಬೇಸತ್ತು, ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಕೆಆರ್ ಪುರಂ ನಿವಾಸಿಯನ್ನು ಬಂಧಿಸಲಾಗಿತ್ತು. ಕೊರೋನಾ ನಿಯಮಗಳ ಪ್ರಕಾರ ಆರೋಪಿಯ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು.

ಸೋಮವಾರ ಮಧ್ಯಾಹ್ನ ಆರೋಪಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಇದೀಗ ಆರೋಪಿಯನ್ನು ಬಂಧಿಸಿದ್ದ ಮತ್ತು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದ ಪೊಲೀಸರಿಗೆ ಸೋಂಕಿನ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯೇ ಮುಳಬಾಗಿಲು ನಗರ ಠಾಣೆ, ಡಿವೈಎಸ್ಪಿ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಮಾಡಿದ್ದು, ಜೊತೆಗೆ ಡಿವೈಎಸ್ಪಿ, ಎಸ್​ಐ ಸೇರಿ ಒಟ್ಟು 22 ಸಿಬ್ಬಂದಿಯನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ. ಇಂದು ಆರೋಗ್ಯ ಇಲಾಖೆ ಪೊಲೀಸರಿಗೆ ಕೊರೋನಾ ಪರೀಕ್ಷೆ ನಡೆಸಲಿದೆ ಎಂದು ಕೋಲಾರ ಎಸ್​ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

Comments are closed.