ಕರ್ನಾಟಕ

ಇಂದಿನಿಂದ ಬೆಂಗಳೂರಿನ ನಿಮ್ಹಾನ್ಸ್‌ ಹೊರರೋಗಿಗಳ ವಿಭಾಗ ಆರಂಭ

Pinterest LinkedIn Tumblr


ಬೆಂಗಳೂರು: ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ನಿಂದ ಮುಚ್ಚಿದ್ದ ನಿಮ್ಹಾನ್ಸ್‌ನ ಹೊರರೋಗಿಗಳ ವಿಭಾಗ ಸೋಮವಾರದಿಂದ(ಜೂ.1) ಮತ್ತೆ ತೆರೆಯಲಿದೆ. ಆದರೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಮಾತ್ರ ಸೇವೆ ದೊರೆಯಲಿದೆ.

ಕೊರೊನಾ ಭೀತಿ ಆರಂಭವಾದ ಬಳಿಕ ತುರ್ತು ಆರೋಗ್ಯ ಸೇವೆಗಳನ್ನು ಮಾತ್ರ ನೀಡುವಂತೆ ಸರಕಾರ ಸೂಚನೆ ನೀಡಿತ್ತು. ಅದರಂತೆ, ಮಾ.26ರಂದು ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಮುಚ್ಚಲಾಗಿತ್ತು. ಇದರಿಂದಾಗಿ ರೋಗಿಗಳು ಸಾಮಾನ್ಯ ಆರೋಗ್ಯ ಸೇವೆ ಸಿಗದೆ ಪರದಾಡಬೇಕಾಯಿತು. ಹಲವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಈಗ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

ಆದರೆ, ಹೊರರೋಗಿಗಳ ವಿಭಾಗಕ್ಕೆ ಬರುವ ಮುನ್ನ ರೋಗಿಗಳು ನೋಂದಣಿ ಮಾಡಿಕೊಂಡಿರಬೇಕು. ಇದಕ್ಕಾಗಿ ಐವಿಆರ್‌ಎಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ದೂ: 080-26991699ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಂಡು ಬರುವ ದಿನವನ್ನು ತಿಳಿಸಬೇಕು. ನಂತರ ಸಂಸ್ಥೆಯ ಸಿಬ್ಬಂದಿ ರೋಗಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಳಿಕ ಚಿಕಿತ್ಸೆಗಾಗಿ ರೋಗಿ ಆಸ್ಪತ್ರೆಗೆ ಬರುವ ಅಗತ್ಯವಿದೆಯೇ ಎಂದು ನಿರ್ಧರಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರ ರೋಗಿಗೆ ಬರಲು ಸೂಚಿಸಲಾಗುತ್ತದೆ.

ಮಾಹಿತಿಗೆ ಆಸ್ಪತ್ರೆಯ ಸಹಾಯವಾಣಿ ದೂ: 080-46110007ಗೂ ಕರೆ ಮಾಡಬಹುದು.

Comments are closed.