ಕರ್ನಾಟಕ

ರಾಜ್ಯದಲ್ಲಿ 143 ಕೊರೋನಾ ಕೇಸ್ ಪತ್ತೆ

Pinterest LinkedIn Tumblr


ಬೆಂಗಳೂರು (ಮೇ 21): ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಕೆಗೂ ಮೊದಲು ದಿನಕ್ಕೆ 40ರಿಂದ 50 ಇರುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಈಗ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದಲ್ಲಿ ದಿನವೊಂದಕ್ಕೆ 100ಕ್ಕೂ ಹೆಚ್ಚು ಕೊರೋನಾ ಸೋಂಕಿತರ ಪ್ರಕರಣಗಳು ಕಂಡುಬರುತ್ತಿವೆ. ನಿನ್ನೆ ಸಂಜೆಯಿಂದ ಇಂದು ಸಂಜೆಯವರೆಗೆ ರಾಜ್ಯದಲ್ಲಿ 143 ಕೊರೋನಾ ಸೋಂಕಿತ ಕೇಸ್​ಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,605ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 143 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರ್ನಾಲ್ಕು ದಿನಗಳಂತೆ ಇಂದು ಕೂಡ ಮಂಡ್ಯದಲ್ಲಿ ಅತಿಹೆಚ್ಚು ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಮಂಡ್ಯ- 33, ಹಾಸನ- 13, ಬಳ್ಳಾರಿ- 11, ಉಡುಪಿ- 26, ಬೆಂಗಳೂರು- 6, ಬೆಳಗಾವಿ- 9, ದಾವಣಗೆರೆ- 3, ಮೈಸೂರು- 1, ಉತ್ತರ ಕನ್ನಡ- 7, ವಿಜಯಪುರ- 1, ದಕ್ಷಿಣ ಕನ್ನಡ- 5, ಧಾರವಾಡ- 5, ಶಿವಮೊಗ್ಗ- 6, ಚಿಕ್ಕಬಳ್ಳಾಪುರ- 2, ಗದಗ- 2, ತುಮಕೂರು- 1, ರಾಯಚೂರು- 5, ಕೋಲಾರ- 2, ಇತರೆ ರಾಜ್ಯಗಳಿಂದ ಬಂದು ಕ್ವಾರಂಟೈನ್​ನಲ್ಲಿರುವ 5 ಜನರಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಇದುವರೆಗೂ 571 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 992 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಇಂದು ಪತ್ತೆಯಾಗಿರುವ ಹೊಸ ಕೊರೋನಾ ರೋಗಿಗಳ ಪೈಕಿ ಬಹುತೇಕರು ಮುಂಬೈ, ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇನ್ನು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಪತ್ತೆಯಾಗಿರುವ ಕೊರೋನಾ ಕೇಸ್​ಗಳಲ್ಲಿ ಬಹುತೇಕರು ಯುಎಇಯಿಂದ ಮಂಗಳೂರಿಗೆ ಬಂದವರಾಗಿದ್ದಾರೆ.

Comments are closed.