ಕರ್ನಾಟಕ

ಆನ್ ಲೈನ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಿರಾಜಪೇಟೆಯಲ್ಲಿ 12 ಮಂದಿ ಬಂಧನ

Pinterest LinkedIn Tumblr

ವಿರಾಜಪೇಟೆ: ಆನ್‌ಲೈನ್ ಪಾಸ್ ಬಳಸಿ ಗಾಂಜಾ ಮಾರಾಟ ನಡೆಸಿದ್ದ 12 ಮಂದಿಯನ್ನು ಕೊಡಗಿನ ವಿರಾಜಪೇಟೆಯಲ್ಲಿ ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ. ಇವರೆಲ್ಲರೂ ಕಾಲೇಜು ವಿದ್ಯಾರ್ಹಿಗಳಿಗೆ ಗಾಂಜಾ ಪೂರೈಸುತ್ತಿದ್ದರೆಂದು ಆರೋಪಿಸಲಾಗಿದೆ.

ವಿರಾಜಪೇಟೆಯ ಸುಂಕದಕಟ್ಟೆ ನಿವಾಸಿ ನಿಸಾರ್ ಅಹಮದ್, ಬಂಗಾಳ ಬೀದಿಯ ಎಂಎಸ್ ಸಾಧಿಕ್, ಮಡಿಕೇರಿ ಕ್ರೀಡಾಂಗಣ ಸಮೀಪ ನಿವಾಸಿಗಳಾದ ಬೌತೇಶ್ ಡಿ’ಸೋಜಾ, ಎಂಎಚ್ ರಫೀಕ್, ಹಾಜತ್ತೂರು ತೊಂಬತ್ತುಮಯ ಕರಣ್, ಮಡಿಕೇರಿ ತ್ಯಾಗರಾಜ ಕಾಲೋನಿಯ ಅರೀಸ್, ವಿರಾಜಪೇಟೆ ಸುಣ್ಣದ ಬೀದಿ ನಿವಾಸಿ ಸಾಯಿ ಲಾಲ್, ಮೊರಗಲ್ಲಿಯ ರಿಝ್ವಾನ್, ಮಡಿಕೇರಿ ಆಝಾದ್ ನಗರದ ಮೊಹಮದ್ ಹಾರೀಸ್, ಉಕ್ಕುಡ ಜರ್ಣಂಗೇರಿಯ ಸಿಟಿ ದಿನೇಶ್, ಎಫ್ ಎಂಕೀಂಸಿ ಕಾಲೇಜು ಸಮೀಪದ ನಿವಾಸಿ ಎನ್.ಸಿ. ಅಯ್ಯಪ್ಪ, ಚೈನ್ ಗೇಟ್ ನಿವಾಸಿ ಮಿಲನ್ ಎಂಜಿ ಬಂಧಿತರೆಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಈ ಬಗ್ಗೆ ಮಾಹಿತಿ ನೀಡಿದ್ದು ಬಂಧಿತರಿಂದ 3 ಲಕ್ಷ ರೂ. ಮೌಲ್ಯದ 9 ಕೆ.ಜಿ. ಗಾಂಜಾ 1,99,670 ರು.ನಗದು, 11ಮೊಬೈಲ್, 5 ನಾಲ್ಕು ಚಕ್ರದ ವಾಹನಗಳು, ಒಂದು ಆಟೋ ರಿಕ್ಷಾ, ಒಂದು ದ್ವಿಚಕ್ರ ವಾಹನಗಳನ್ನು ವಶಡಿಸಿಕೊಳ್ಳಲಾಗಿದೆ ಎಂದರು.

Comments are closed.