ಕರ್ನಾಟಕ

ಸಿನಿಮಾ ಶೂಟಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸರ್ಕಾರ

Pinterest LinkedIn Tumblr


ಲಾಕ್ ಡೌನ್ ಘೋಷಣೆ ಆದಾಗಿನಿಂದ ಧಾರಾವಾಹಿ, ಸಿನಿಮಾ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ದಿನಗೂಲಿ ನೌಕರರಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಧಾರಾವಾಹಿ ಶೂಟಿಂಗ್‌ಗೆ ಅವಕಾಶ ಮಾಡಿಕೊಡಿ ಎಂದು ಸರ್ಕಾರದ ಬಳಿ ಮನವಿ ಮಾಡಲಾಗಿತ್ತು. ಅದರಂತೆ ಹಲವು ನಿಯಮಗಳನ್ನು ವಿಧಿಸಿ ಧಾರಾವಾಹಿ ಶೂಟಿಂಗ್ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈಗ ಸಿನಿಮಾ ಶೂಟಿಂಗ್ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮನವಿ ಮಾಡಿದಾಗ ಕೂಡ ಬಿ.ಎಸ್ ಯಡಿಯೂರಪ್ಪ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಆರ್ ಅಶೋಕ್ ಅವರು ನೀಡಿದ ಪ್ರತಿಕ್ರಿಯೆ ಏನು?
ಶೂಟಿಂಗ್ ಮಾಡುವಂತಿಲ್ಲ, ಆದರೆ ಸಿನಿಮಾ ಪ್ರಿ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾಡಬಹುದೆಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಕೆಲಸ ಆರಂಭಿಸಬಹುದು ಎಂದು ಅಶೋಕ್ ಅವರು ತಿಳಿಸಿದ್ದಾರೆ.

ನಿರ್ಮಾಪಕ ಕೆ.ಮಂಜು ಶೂಟಿಂಗ್ ವಿಚಾರವಾಗಿ ಹೇಳಿದ್ದೇನು?
‘ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಿಂದ ಶೂಟಿಂಗ್‌ಗೆ ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಶೂಟಿಂಗ್‌ಗೆ ಅವಕಾಶ ಮಾತ್ರ ನೀಡಲಾಗಿಲ್ಲ. 100 ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ. ಎಡಿಟಿಂಗ್, ಗ್ರಾಫಿಕ್ಸ್, ಸಿಜಿ, ಡಬ್ಬಿಂಗ್ ಕೆಲಸಗಳನ್ನು ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕನ್ನಡ ಸಿನಿಮಾಗಳಿಗೆ ಈಗಾಗಲೇ ನಿರ್ಮಾಪಕರೆಲ್ಲ ಸೇರಿ 750 ಕೋಟಿ ರೂಪಾಯಿ ಬಂಡವಾಳ ಹಾಕಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದೆ. ಹೀಗಾಗಿ ಸರ್ಕಾರ ಈ ಕುರಿತಾಗಿ ಏನೆಲ್ಲ ಆದೇಶವನ್ನು ಹೊರಡಿಸಿದೆಯೋ ಅದನ್ನು ನಾವು ಪಾಲಿಸುತ್ತೇವೆ. ಸಿನಿಮಾಗಳ ಪ್ರಿ ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಬಹುದು, ಆದರೆ ಶೂಟಿಂಗ್ ಮಾಡುವಂತಿಲ್ಲ. ಸ್ಟುಡಿಯೋದಲ್ಲಿ ಏಳರಿಂದ ಎಂಟು ಜನ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಬಳಸಿ ಕೆಲಸ ಮಾಡಬಹುದು’ ಎಂದು ನಿರ್ಮಾಪಕ ಕೆ.ಮಂಜು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಸಿನಿಮಾದ ಒಳಾಂಗಣ ಕೆಲಸಕ್ಕೆ ಅನುಮತಿ ನೀಡಿದ್ದಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದೆ.

Comments are closed.