ಕರ್ನಾಟಕ

ಗ್ಯಾಸ್ ಮೇಲೆ ಇಟ್ಟಿದ ಹಾಲು – ದಂಪತಿ ಜೀವ ಯಮನ ಪಾಲು

Pinterest LinkedIn Tumblr

ಗ್ಯಾಸ್ ಮೇಲೆ ಹಾಲಿಟ್ಟ ದಂಪತಿ ಅದನ್ನು ಮರೆತು ಹಾಗೇ ನಿದ್ದೆಗೆ ಜಾರಿದ್ದಾರೆ. ಇದರ ಪರಿಣಾಮ ನಿದ್ರಾವಸ್ಥೆಯಲ್ಲಿಯೇ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಬೇಗೂರು ಬಳಿಯ ದೇವರ ಚಿಕ್ಕನಹಳ್ಳಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ಚಿತ್ತೂರು ಮೂಲದ ನಾಗಮನಿ ಹಾಗೂ ಪದ್ಮಾವತಿ ಮೃತ ದಂಪತಿಗಳು. ಕಳೆದ 5 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದು, ಸದ್ಯ ನಾಗಮನಿ ಕಾರ್ಪೆಂಟರ್ ಆಗಿ ಹಾಗೂ ಪದ್ಮಾವತಿ ಗಾಮೆಂರ್ಟ್ಸ್ ಕೆಲಸಕ್ಕೆ ಹೋಗುತ್ತಿದ್ದರಂತೆ.

ಪದ್ಮಾವತಿ ಬೆಳಗಿನ ಜಾವ ಕಾಫಿ ಮಾಡಲು ಗ್ಯಾಸ್ ಮೇಲೆ ಇಟ್ಟಿದ್ದಾರೆ. ಬಳಿಕ ನಿದ್ರೆಗೆ ಜಾರಿದ್ದಾರೆ. ಹಾಲು ಸ್ಟೌವ್ ಮೇಲೆ ಇಟ್ಟಿದ್ದು, ಉಕ್ಕಿದೆ. ಜೊತೆಗೆ ಬೆಂಕಿ ಆರಿದೆ. ಇದರಿಂದಾಗಿ ಸಿಲಿಂಡರ್‌ ನಲ್ಲಿದ್ದ ಅನಿಲ ಮನೆ ತುಂಬಾ ಆವರಿಸಿದೆ. ಮನೆ ಚಿಕ್ಕದಾಗಿದ್ದರಿಂದ ಉಸಿರಾಡಲು ತೊಂದರೆಯಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ದಂಪತಿ ಮನೆಯಿಂದ ಹೊರಬರದ ಹಿನ್ನೆಲೆ ಸ್ಥಳೀಯರು ಸಂಜೆ ವೇಳೆಗೆ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆಸಿದಾಗ ಘಟನೆ ಬೆಳಕಿಗೆ ಬಂದಿದೆ.

Comments are closed.