ಕರ್ನಾಟಕ

ಹೆಂಡತಿಗೆ 30 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಪತಿ

Pinterest LinkedIn Tumblr


ಮಡಿಕೇರಿ: ತನ್ನ ಪತ್ನಿಯ ನಡತೆ ಸರಿಯಿಲ್ಲವೆಂದು ಅನುಮಾನಿಸುತ್ತಿದ್ದ ಪತಿಯೊಬ್ಬ ಆಕೆಯನ್ನು 30 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ.

ಜುಬೈದಾ(25) ಹತ್ಯೆಯಾದವರು. ಪತಿ ಷರೀಫ್ 7 ವರ್ಷದ ಹಿಂದೆ ಜುಬೈದಾಳನ್ನು ವಿವಾಹವಾಗಿದ್ದು, ಇಬ್ಬರು ಮಕ್ಖಳಿದ್ದಾರೆ. ಕಳೆದ ರಾತ್ರಿ ನಡತೆ ಸರಿಯಿಲ್ಲವೆಂದು ನಡೆದ ಜಗಳ ತಾರಕಕ್ಕೇರಿದ್ದು ಪತಿ ಷರೀಪ್ 30 ಬಾರಿ ಪತ್ನಿಗೆ ಚಾಕುವಿನಿಂದ ಇರಿದಿದ್ದು ಆಕೆ ಸಾವನ್ನಪ್ಪಿದ್ದಾಳೆ.

ಷರೀಪ್ ನನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments are closed.