ಕರ್ನಾಟಕ

ಹುಬ್ಬಳ್ಳಿಯಿಂದ ನವದೆಹಲಿಗೆ ಹೊಸ ವಿಮಾನಯಾನ ಸಂಪರ್ಕ

Pinterest LinkedIn Tumblr

ಹುಬ್ಬಳ್ಳಿ : ಕರ್ನಾಟಕದ ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ವಿಮಾನಯಾನ ಸಂಪರ್ಕ ಏರ್ಪಟ್ಟಿದೆ. ನವೆಂಬರ್ 06ರಿಂದ ದೆಹಲಿಯ ಎರಡನೇ ವಿಮಾನ ನಿಲ್ದಾಣ ಹಿಂಡಾನ್ ಗೆ ನೇರ ವಿಮಾನ ಸಂಚರಿಸಲಿದೆ.

ಉಡಾನ್ ಯೋಜನೆಯಡಿಯಲ್ಲಿನ ಅತ್ಯಂತ ದೊಡ್ಡ ವಾಣಿಜ್ಯ ಏರ್ ಟ್ರಾವೆಲ್ ಮಾರ್ಗ ಇದಾಗಲಿದೆ. ಮುಂಬೈ, ಬೆಂಗಳೂರು, ಅಹಮದಾಬಾದ್, ತಿರುಪತಿ, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸದ್ಯ ಸ್ಟಾರ್ ಏರ್ ಕಾರ್ಯ ನಿರ್ವಹಿಸುತ್ತಿದ್ದು, ಹಿಂಡಾನ್ 7ನೇ ತಾಣವಾಗಿ ಸೇರ್ಪಡೆಯಾಗಲಿದೆ.

ಅಕ್ಟೋಬರ್ 07,2019ರಿಂದ ಸ್ಟಾರ್ ಏರ್ ಟಿಕೆಟ್ ಮಾರಾಟ ಆರಂಭ ಮಾಡಿದೆ. ಹಿಂಡಾನ್ ವಿಮಾನ ನಿಲ್ದಾಣ ಅಕ್ಟೋಬರ್ 11ರಿಂದ ಆರಂಭಗೊಂಡಿದ್ದು, ಹೆರಿಟೇಜ್ ವಿಮಾನಯಾನ ಸಂಸ್ಥೆ ವಾಣಿಜ್ಯ ವಿಮಾನ ಹಾರಾಟ ನಡೆಸುತ್ತಿದೆ. 9 ಸೀಟುಗಳ ಏರ್ ಕ್ರಾಫ್ಟ್ ಹಿಂಡಾನ್ ನಿಂದ ಪಿಥೋರಾಘರ್ ಗೆ ಮೊದಲ ವಿಮಾನ ಹಾರಾಟ ಕಂಡಿದೆ. ಅಕ್ಟೋಬರ್ 27ರಿಂದ ಪ್ರತಿ ವಾರಕ್ಕೆ 23403 ವಿಮಾನ ಹಾರಾಟವನ್ನು 103 ವಿಮಾನ ನಿಲ್ದಾಣಗಳು ಕಾಣಲಿವೆ ಎಂದು ಡಿಜಿಸಿಎ ಅಧಿಕಾರಿ ಹೇಳಿದ್ದಾರೆ.

ಸ್ಟಾರ್ ಏರ್ ವಿಮಾನಯಾನ: ಹುಬ್ಬಳ್ಳಿ ಹಾಗೂ ಹಿಂಡಾನ್ ನಡುವೆ ವಾರಕ್ಕೆ ಮೂರು ದಿನ ಸಂಚರಿಸಲಿದೆ. 3,699 ರು ನಿಂದ ಟಿಕೆಟ್ ಬೆಲೆ ಆರಂಭ. ಅಕ್ಟೋಬರ್ 07ರಿಂದ ಟಿಕೆಟ್ ನೀಡಲಾಗುತ್ತಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ 1.05 PM ಕ್ಕೆ ಹೊರಟು 3.45 PM ಗೆ ಹಿಂಡಾನ್ ತಲುಪಲಿದೆ. ಹಿಂಡನ್ ನಿಂದ 4.10 PM ಗೆ ಹೊರಟು ಹುಬ್ಬಳ್ಳಿಯನ್ನು 6.50 PM ಗೆ ತಲುಪಲಿದೆ.

ಶನಿವಾರದಂದು ಹುಬ್ಬಳ್ಳಿಯಿಂದ 11.50 AM ಗೆ ಹೊರಟು ಹಿಂಡಾನ್ 2.30 pm ge ತಲುಪಲಿದೆ. ಹಿಂಡಾನ್ ನಿಂದ 3.00 PM ಗೆ ಹೊರಟು ಹುಬ್ಬಳ್ಳಿಗೆ 5.40 PM ಗೆ ವಾಪಸ್ ಬರಲಿದೆ. ಬೆಂಗಳೂರು-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ- ತಿರುಪತಿ ನಡುವೆ ಸ್ಟಾರ್ ಏರ್ ವಿಮಾನಗಳು ಈಗಾಗಲೇ ಸಂಚರಿಸುತ್ತಿವೆ.

Comments are closed.