ಕರ್ನಾಟಕ

ನನ್ನ ಮನೆಗೆ ಐಟಿ ದಾಳಿಯಾದರೆ ಯಡಿಯೂರಪ್ಪ ಅವರ ದಾಖಲೆಗಳೇ ಸಿಗುತ್ತವೆ: ಕುಮಾರಸ್ವಾಮಿ

Pinterest LinkedIn Tumblr


ಹಾಸನ: ನನ್ನ ಮನೆಗೆ ಐಟಿಯವರು ಬಂದ್ರೆ ನನ್ನ ಮನೆಯಲ್ಲಿ ಇರುವುದು ಯಡಿಯೂರಪ್ಪ ಅವರ ದಾಖಲೆಗಳೇ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಹಾಸನಾಂಬೆಯ ದರ್ಶನಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಸಿಎಂ ಆಗಿ ಲೂಟಿ ಮಾಡಿಲ್ಲ, ಜನಗಳ ಆಸ್ತಿ ಸಂಪಾದನೆ ಮಾಡಿದ್ದೇನೆ. ದೇವೇಗೌಡರಿಗೆ ರಾಜ್ಯ ಬಿಡಿ ಎಂದು ನಾನೇ ಹೇಳುತ್ತೇನೆ. ಅವರು ಸೋತಿರಬಹುದು, ಆದರೆ ಅವರು ದೇಶದಲ್ಲಿ ಇರಬೇಕು. ಅವರಿಗೆ ಅಧಿಕಾರ ಬೇಡ,ಆದರೆ ಮತ್ತೊಂದು ಕ್ರಾಂತಿಯಾಗಬೇಕು. ಇಲ್ಲವಾದ್ರೆ ದೇಶ ಹಾಳಾಗಲಿದೆ, ಈಗಾಗಲೇ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ನೇತೃತ್ವ ವಹಿಸಿಕೊಳ್ಳದೇ ಇದ್ದರೆ ದೇಶಕ್ಕೆ ಕಷ್ಟಕಾಲ ಬರಲಿದೆ ಎಂದರು.

ದೇವೇಗೌಡರು ಹಾಸನದಿಂದಲೇ ಲೋಕಸಭಾ ಚುನಾವಣೆಗೆ ನಿಲ್ಲಬೇಕಿತ್ತು. ಲೋಕಸಭೆಯಲ್ಲಿ ಗೌಡರು ಇರಬೇಕಿತ್ತು ಎಂದು ಪಶ್ವತ್ತಾಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾವು ಹೆದರಿ ಕೂರೋದಿಲ್ಲ, ರಾಜ್ಯ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತದ ಬಗ್ಗೆ ದನಿ ಎತ್ತಬೇಕಿದೆ. ಚುನಾವಣಾ ಫಲಿತಾಂಶಕ್ಕೂ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧ ಇಲ್ಲ. ದೇಶದಲ್ಲಿ ಬದಲಾವಣೆಗೆ ಒಂದು ವೇದಿಕೆ ಬೇಕು. ಸತ್ಯಸಂಗತಿಗಳನ್ನು ಧೈರ್ಯವಾಗಿ ಹೇಳಬೇಕಿದೆ ಎಂದರು.

ಉಪಚುನಾವಣೆಯ ಬಗ್ಗೆ ಮಾತನಾಡಿದ ಮಾಜಿ ಸಿಎಂ, 15 ಕ್ಷೇತ್ರಗಳ ಉಪ ಚುನಾವಣೆ ಗಂಭೀರವಾಗಿ ಎದುರಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ. ಎಲ್ಲೆಡೆ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಹೇಳಿದರು.

Comments are closed.