ಕರ್ನಾಟಕ

ಮಹಿಷ ದಸರಾ ಕಾರ್ಯಕ್ರಮದ ಪೆಂಡಾಲು ತೆರವುಗೊಳಿಸುವಂತೆ ತಾಕೀತು ಕುರಿತು ಕ್ಷಮೆ ಕೇಳಿದ್ದೇನೆ: ಪ್ರತಾಪ್ ಸಿಂಹ

Pinterest LinkedIn Tumblr


ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪುಷ್ಪಾರ್ಚನೆ ಮಾಡುವ ಮುನ್ನ ದಿನ ಆಕೆಗೆ ಬೈಯ್ಯೋದಕ್ಕೆ ಅವಕಾಶ ಕೊಟ್ಟಿದ್ದರು (ಮಹಿಷ ದಸರಾ). ಇದರಿಂದ ಮನಸ್ಸಿಗೆ ನೋವಾಗಿ ನಾನು ಆ ರೀತಿ ಮಾತನಾಡಿದ್ದೆ. ಹೀಗಾಗಿ ನಾನೇ ಖುದ್ದು ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಬಳಿ ಕ್ಷಮೆ ಯಾಚಿಸಿದ್ದೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ದಸರೆಯಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ನಾವೆಲ್ಲ ಒಂದೇ ಕುಟುಂಬದವರಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಮಹಿಷ ದಸರಾ ಕಾರ್ಯಕ್ರಮಕ್ಕಾಗಿ ಹಾಕಿದ್ದ ಪೆಂಡಾಲು ತೆರವುಗೊಳಿಸುವಂತೆ ಪ್ರತಾಪ್ ಸಿಂಹ ತಾಕೀತು ಮಾಡಿದ್ದರು.

ಮುಂದಿನ ಮೂರು ವರ್ಷ ಸೋಮಣ್ಣನವರೇ ‌ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುತ್ತಾರೆ. ಈ ಮಾತನ್ನು ಸ್ವತಃ ಸಿಎಂ ಬಿಎಸ್‌ವೈ ಅವರೇ ಹೇಳಿದ್ದಾರೆ. ದಸರಾ ಯಶಸ್ವಿಯಾಗಿ ಮುಗಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಖುಷಿಯಾಗಿದ್ದಾರೆ‌. ಸೋಮಣ್ಣನವರಿಗೆ ಮುಂದಿನ ದಸರಾವನ್ನು ನೀನೇ ಮಾಡು ಅಂತಾನು ಹೇಳಿದ್ದಾರೆ. ಹಾಗಾಗಿ ಮುಂದಿನ ದಸರಾವನ್ನು ಸೋಮಣ್ಣನವರ ಉಸ್ತುವಾರಿಯಲ್ಲೇ ಮಾಡ್ತೀವಿ ಎಂದರು ಪ್ರತಾಪ್ ಸಿಂಹ ಹೇಳಿದರು.

Comments are closed.