ಕರ್ನಾಟಕ

ಪರಪ್ಪನ ಅಗ್ರಹಾರದಲ್ಲಿ ಚೂಪಾದ ಆಯುಧಗಳು, ಗಾಂಜಾ, ಸ್ಮೋಕಿಂಗ್ ಪೈಪ್ ಪತ್ತೆ

Pinterest LinkedIn Tumblr

ಬೆಂಗಳೂರು, ಅಕ್ಟೋಬರ್ 9: ಜೈಲಿನಲ್ಲಿ ಇದ್ದು ವ್ಯವಹಾರ- ದಂಧೆ ಮಾಡುವುದನ್ನು, ಸಕಲ ಸವಲತ್ತುಗಳನ್ನು ಅನುಭವಿಸುತ್ತಿರುವುದನ್ನು ಕೇಳಿರುತ್ತೀರಿ. ಇದೀಗ ಆ ರೀತಿ ಸೌಕರ್ಯ- ಅನುಕೂಲ ಹಾಗೂ ಆಯುಧಗಳನ್ನು ಕೈದಿಗಳು ಹೊಂದಿದ್ದನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇರುವ ಸೆಂಟ್ರಲ್ ಜೈಲಿನಲ್ಲಿ ಪತ್ತೆ ಮಾಡಲಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಬುಧವಾರ ಚೂಪಾದ ಆಯುಧಗಳು, ಗಾಂಜಾ, ಸ್ಮೋಕಿಂಗ್ ಪೈಪ್ ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಈ ದಾಳಿಯನ್ನು ನಡೆಸಿದ್ದಾರೆ.

ಕನಿಷ್ಠ ಮೂವತ್ತೇಳು ಚಾಕು/ಡ್ಯಾಗರ್ ಗಳು, ಗಾಂಜಾ, ಸ್ಮೋಕಿಂಗ್ ಪೈಪ್ ಗಳು, ಮೊಬೈಲ್ ಫೋನ್, ಸಿಮ್ ಕಾರ್ಡ್ ಗಳನ್ನು ಜೈಲಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನೊಳಗೆ ಇಂಥ ವಸ್ತುಗಳು ಹೇಗೆ ಹೋದವು ಎಂಬ ದಾರಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Comments are closed.