ಕರ್ನಾಟಕ

ಕಪ್ಪು ಪಟ್ಟಿ ಧರಿಸಿ ಗಾಂಧಿ ಜಯಂತಿ ಆಚರಣೆ

Pinterest LinkedIn Tumblr


ಬೀದರ್: ಗಾಂಧಿ ಗ್ರಾಮ ಪುರಸ್ಕಾರ ನೀಡುವಲ್ಲಿ ತಮ್ಮ ಗ್ರಾಮ ಪಂಚಾಯಿತಿಗೆ ಅನ್ಯಾಯ ವಾಗಿದೆ ಎಂದು ಆರೋಪಿಸಿ, ಬೀದರ್ ತಾಲೂಕಿನ ಚಾಂಬೋಳ ಗ್ರಾಮ ಪಂಚಾಯಿತಿನಲ್ಲಿ ಬುಧವಾರ ಕಪ್ಪು ಪಟ್ಟಿ ಧರಿಸಿ ಗ್ರಾಪಂ ಪಿಡಿಒ ಹಾಗೂ ಗ್ರಾಮಸ್ಥರು ಮಹಾತ್ಮಾ ಗಾಂಧಿ ಜಯಂತಿ ಆಚರಿಸಿದರು.

2018-19ನೇ ಸಾಲಿನಲ್ಲಿ ಚಾಂಬೋಳ ಗ್ರಾಮ ಪಂಚಾಯಿತಿಯು ಉತ್ತಮ ಅಂಕಗಳನ್ನು ಪಡೆದು ಪ್ರಶಸ್ತಿಗೆ ಆಯ್ಕೆಯಾದರೂ, ಪ್ರಶಸ್ತಿ ನೀಡದೇ, ಅವ್ಯವಹಾರ ಎಸಗಿರುವ ಹಾಗೂ ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವವರಿಗೆ ಪ್ರಶಸ್ತಿ ನೀಡಿ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಹೀಗಾಗಿ, ಚಾಂಬೋಳ ಗ್ರಾಪಂನಲ್ಲಿ ಗಾಂಧಿ ಜಯಂತಿಯನ್ನು ಕಪ್ಪು ದಿನಾಚರಣೆಯನ್ನಾಗಿ ಆಚರಿಸಲಾಗಿದೆ ಎಂದು ಪಿಡಿಒ ಮಂಗಲಾ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ನಮ್ಮ ಗ್ರಾಮ ಪಂಚಾಯಿತಿಗೆ ಅನ್ಯಾಯವಾಗಿರುವ ವಿಷಯ ಎಲ್ಲರಿಗೂ ಗೊತ್ತಿದ್ದರೂ ಅಧಿಕಾರ ದುರುಪಯೋಗ ಪಡಿಸಿಕೊಂಡು, ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವುದನ್ನು ಖಂಡಿಸುತ್ತೇವೆ ಎಂದರು.

ಪಿಡಿಒ ಸೇರಿದಂತೆ ಗ್ರಾಮಸ್ಥರು ಕೈಗೆ ಕಪ್ಪು ಪಟ್ಟಿ ಧರಿಸಿ ಗಾಂಧಿ ಜಯಂತಿಯಲ್ಲಿ ಭಾಗವಹಿಸಿದರು.

ನಮಗೆ ಆಗಿರುವ ಅನ್ಯಾಯದಿಂದಾಗಿ ದುಃಖ ವ್ಯಕ್ತಪಡಿಸಿ, ಕರಿ ದಿನವನ್ನಾಗಿ ಆಚರಿಸಲಾಗಿದೆ ಎಂದು ಪಿಡಿಒ ಮಂಗಲಾ ತಿಳಿಸಿದರು.

Comments are closed.