ಕರ್ನಾಟಕ

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ ಜನ!

Pinterest LinkedIn Tumblr


ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳಲ್ಲಾ ಜಲಾವೃತವಾಗಿದ್ದು. ಭಾರಿ ಮಳೆ ಹಿನ್ನಲೆಯಲಿ ರಾಮಕೃಷ್ಣಾಶ್ರಮ ಮತ್ತು ಬಿನ್ನಿಮಿಲ್ ಗಳಲ್ಲಿ ಮರಗಳು ಧರೆಗುರುಳಿದವು. ಕೂಡಲೇ ಎಚ್ಚೆತ್ತ ಬಿಬಿಎಂಪಿ ಮರ ತೆರವು ನಡೆಸಿತು. ಆದರೆ ಕೋರಮಂಗಲ ಮತ್ತು ಬಿಟಿಎಂ ಲೇಔಟ್ ಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನ ತೀವ್ರ ತೊಂದರೆ ಅನುಭವಿಸುವಂತಾಯ್ತು.

ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನೆನ್ನೆ ನಾಲ್ಕು ಗಂಟೆಗೆ ಪ್ರಾರಂಭವಾದ ಭಾರಿ ಮಳೆ ಬಿಟ್ಟು ನಗರದ ಎಲ್ಲಾ ಸುರಿದು ರಾತ್ರಿ 9 ಗಂಟೆಗೆ ಅಲ್ಪವಿರಾಮ ಹಾಡಿತ್ತು. ಮಳೆ ಹಿನ್ನಲೆ ಬಸವನಗುಡಿಯ ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮಬಳಿ ಎರಡು ಮರ ಬಿದ್ದಿದೆ.

ಇನ್ನು ಬಿನ್ನಿ ಮಿಲ್ ಮತ್ತು ಕೋರಮಂಗಲಗಳಲ್ಲಿ ಒಟ್ಟು ನಾಲ್ಕುಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.ನಂತರ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರ ತೆರವುಗೊಳಿಸಿದರು.

ಇನ್ನು ಭಾರಿ ಮಳೆಗೆ ಬಿಟಿಎಂ ಮತ್ತು ಕೋರಮಂಗಲಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ತೀವ್ರ ಸಮಕಷ್ಟ ಎದುರಿಸಿತು. ಇದು ಬೆಂಗಳೂರಿನ ಇಮೇಜ್ ಗೆ ದೊಡ್ಡ ಡ್ಯಾಮೇಜ್. ಆದ್ದರಿಂದ ಸಂಬಂಧ ಪಟ್ಟ ಇಲಾಖೆ ಮತ್ತು ಜನ ನಗರದ ಬಗ್ಗೆ ಕಾಳಜಿವಹಿಸಿದರೆ ಮಾತ್ರ ನಮ್ಮ ಬೆಂಗಳೂರು ಬದರಾಂಡ್ ನೇಮ್ ಉಳಿಯಲಿದೆ ಅಂತಾರೆ ನೆರೆಯರು.

ಇನ್ನು ನಗರದ ಮೆಜೆಸ್ಟಿಕ್, ಬೊಮ್ಮನಹಳ್ಳಿ, ಮಾರತ್ತಹಳ್ಳಿ, ಬಸವನಗುಡಿ, ಮಲ್ಲೇಶ್ವರಂ, ಮೆಜೆಸ್ಟಿಕ್, ಯಲಹಂಕ ಸುತ್ತಮುತ್ತ ಭಾರಿ ಮಳೆ ಬಿದ್ದಿತ್ತು. ಇನ್ನು ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ನ ಬಾರಿ ಮಳೆ ಮೀರು ಹರುದು ತಗ್ಗು ಪ್ರದೇಶ ಜಲಾವೃತವಾಗಿತ್ತು.

ಇನ್ನು ಬಿಟಿಎಂ ಮತ್ತು ಕೋರಮಂಗಲಗಳಲ್ಲಿ ನಿರ್ಮಾಣವಾಗಿದ್ದ ತಗ್ಗು ಪ್ರದೇಶದ ಲೇಔಟ್ ಗಳಿಗೆ ನೀರು ನುಗ್ಗಿತ್ತು. ಇದರಿಂದ ಜನಚ ಭಯಭೀತಿಯಲ್ಲೆ ರಾತ್ರಿ ಕಳೆಯುವಂತಾಯ್ತು. ಯಾವಾಗ ಮತ್ತೆ ಮಳೆ ಬರುತ್ತೋ, ಮತ್ತೆ ಮಳೆ ನೀರು ಮನೆಗಳಿಗೆ ನುಗ್ಗುತ್ತೋ ಎಂಬ ಆತಂಕದಲ್ಲೆ ಜನ ರಾತ್ರಿ ಕಳೆದರು. ಆದ್ದರಿಂದ ಬಿಬಿಎಂಪಿ ನಗರದ ಚರಂಡಿ ವ್ಯವಸ್ಥೆಯನ್ನು ಸರಿಪಡಿಬೇಕು.

Comments are closed.