ಕರ್ನಾಟಕ

ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿಗೆ ಕಾರಣ ಬಿಚ್ಚಿಟ್ಟ ಸತ್ಯಶೋಧನಾ ಸಮಿತಿಯ ವರದಿ

Pinterest LinkedIn Tumblr


ಬೆಂಗಳೂರು: ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿನ ಪರಮಾರ್ಶೆ ಕುರಿತು ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ನೇಮಿಸಲಾಗಿದ್ದ ಸತ್ಯಶೋಧನಾ ತಂಡ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರಿಗೆ ವರದಿಯನ್ನು ಸಲ್ಲಿಸಿದೆ. ಚುನಾವಣೆಯಲ್ಲಿ ಪಕ್ಷ ಕಡಿಮೆ ಸ್ಥಾನ ಗಳಿಸಲು ಕಾರಣಗಳೇನು ಹಾಗೂ ಪಕ್ಷ ಸಂಘಟನೆ ಮಾಡಬೇಕಾದ ಕೆಲಸಗಳೇನು ಎಂಬ ಮಾಹಿತಿಯನ್ನು ವರದಿಯಲ್ಲಿ ಹೇಳಲಾಗಿದೆ.

ಸತ್ಯಶೋಧನಾ ಸಮಿತಿ ವರದಿಯ ಪ್ರಮುಖಾಂಶಗಳು

ಬಿಜೆಪಿ ಅಬ್ಬರದ ಪ್ರಚಾರ ತಡೆಯಲು ಕೈ ನಾಯಕರು ವಿಫಲರಾಗಿದ್ದು
ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಂಡ ವೀಕ್ ಆಗಿರೋದು
ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಪಪ್ರಚಾರ
ಬಿಜೆಪಿಯ ಅಪಪ್ರಚಾರ ತಡೆಯುವಲ್ಲಿ ಸೋಷಿಯಲ್ ಮೀಡಿಯಾ ವಿಫಲ
ಕಾಂಗ್ರೆಸ್ – ಜೆಡಿಎಸ್ ನಾಯಕರು ಸಂಘಟಿತ ಹೋರಾಟ ಮಾಡಲಿಲ್ಲ
ಪಕ್ಷ ಸಂಘಟನೆಗೆ ಸಂಸದರು, ಶಾಸಕರು ಪ್ರತಿ ತಿಂಗಳೂ ಕಡ್ಡಾಯವಾಗಿ ಕೆಪಿಸಿಸಿಗೆ ದೇಣಿಗೆ ನೀಡಬೇಕು
ಕೆಲವು ನಾಯಕರು ರಿಪಬ್ಲಿಕ್ ಧೋರಣೆ ತೋರಿಸುತ್ತಿರುವುದು ಪಕ್ಷಕ್ಕೆ ಹೊಡೆತ
ಜೆಡಿಎಸ್ ಜೊತೆಗಿನ ಮೈತ್ರಿಯೇ ಹಲವು ಕ್ಷೇತ್ರಗಳ ಹಿನ್ನಡೆಗೆ ಕಾರಣ
ಸಹ ಸಂಘಟನೆಗಳಾದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್​ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ
ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ
ಸರ್ಕಾರವಿದ್ದಾಗ ನಿಗಮ, ಮಂಡಳಿಗಳಲ್ಲಿ ಹಿಂಬಾಲಕರಿಗೆ ಆದ್ಯತೆ
ನಿಷ್ಠಾವಂತ ಕಾರ್ಯಕರ್ತರ ಕೊರತೆ
ಬೂತ್ ಮಟ್ಟದಲ್ಲಿ ಸಂಘಟನೆ ಸರಿಯಾಗಿಲ್ಲ
ಒಂದೇ ಕುಟುಂಬದ ಹಲವರಿಗೆ ಟಿಕೆಟ್ ಕೊಡುವುದಕ್ಕೆ ವಿರೋಧ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ದ ಅಪಪ್ರಚಾರ
ಧರ್ಮ ಒಡೆದರು ಎಂಬ ಅಪಪ್ರಚಾರ ತಡೆಗಟ್ಟಲು ಕಾಂಗ್ರೆಸ್ ವಿಫಲ
ಜೆಡಿಎಸ್ ಕಾಂಗ್ರೆಸ್ ನಡುವಿನ ಹೊಂದಾಣಿಕೆ ಸಮಸ್ಯೆ
ಮೈತ್ರಿ ಸರ್ಕಾರವನ್ನು ಜನತೆ ಒಪ್ಪಲಿಲ್ಲ ಎಂಬ ಅಭಿಪ್ರಾಯ
ಹಲವಾರು ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ವಿರೋಧಿಗಳೊಂದಿಗೆ ಕೈ ಜೋಡಿಸಿದ್ದು

Comments are closed.