ಕರ್ನಾಟಕ

ಬಿಡಿಎ ನಲ್ಲಿ 3 ಸಾವಿರ ಕೋಟಿ ಭ್ರಷ್ಟಾಚಾರ ಪತ್ತೆ

Pinterest LinkedIn Tumblr


ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 3 ಸಾವಿರ ಕೋಟಿ ಬೃಹತ್ ಭ್ರಷ್ಟಾಚಾರ ಬಯಲಾಗಿದೆ.

ಬಿಡಿಎ ಆಯುಕ್ತರಾದ ಡಾ. ಜೆ.ಸಿ. ಪ್ರಕಾಶ್ ಅವರು ಸ್ಥಳ ಸಮೀಕ್ಷೆಗೆ ತೆರಳಿದಾಗ ಸಾವಿರಾರು ಕೋಟಿಯ ಸಿಡಿ ಹಗರಣದ ಕರ್ಮಕಾಂಡ ಬಯಲಾಗಿದೆ. ಅಧಿಕಾರಿಗಳು ಯಾವುದೇ ಸೈಟ್​ಗಳನ್ನು ಪತ್ತೆ ಹಚ್ಚುವ ಕರೆಕ್ಟ್ ಡೈಮೆನ್ಷನ್(ಸಿಡಿ) ಹೆಸರಿನಲ್ಲಿ ಕೋಟ್ಯಂತರ ರೂ. ನುಂಗಿ ನೀರು ಕುಡಿದಿದ್ದಾರೆ.

ಅಧಿಕಾರಿಗಳು ಕೈಬರಹದ ಸಿಡಿಯಿಂದ ಹಲವು ಡೂಪ್ಲಿಕೇಷನ್ ಮಾಡಿ ಹಣ ಪೀಕುತ್ತಿದ್ದರು. ಇನ್ನು ಮುಂದೆ ನಿವೇಶನಗಳ ಕೈಬರಹದ ಸಿಡಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ಆಯುಕ್ತ ಡಾ. ಜೆ.ಸಿ. ಪ್ರಕಾಶ್ ಅವರು, ಆನ್ ಲೈನ್ ಮೂಲಕ ಸಿಡಿ ನೀಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಬಿಟಿವಿಗೆ ಮಾಹಿತಿ ನೀಡಿರುವ ಆಯುಕ್ತರು, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲು ಮುಂದಾಗಿದ್ದೇವೆ. ಕಡತ ಕಣ್ಮರೆಯಂಥ ಪ್ರಕರಣ ತಡೆಯಲು ನಾಳೆಯಿಂದಲೇ ಇ ಆಡಳಿತ ಜಾರಿಗೊಳಿಸಲಾಗುತ್ತದೆ. ನಿವೇಶನದ ಫೋಟೋ ಸಮೇತ ಆನ್ ಲೈನ್ ಸಿಡಿ ಸೌಲಭ್ಯ ಸಿಗಲಿದೆ. ಆನ್ ಲೈನ್ ವ್ಯವಸ್ಥೆಯಿಂದ ಎಷ್ಟು ಸೈಟ್ ಖಾಲಿ ಇದೆ ಅನ್ನೋದು ಗೊತ್ತಾಗುತ್ತದೆ. ಇನ್ನು ಮುಂದೆ ಇ ಆಫೀಸ್ ಮೂಲಕ ಬರುವ ಸಿಡಿ ಮಾತ್ರ ರಿಜಿಸ್ಟ್ರೇಷನ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಆಡಳಿತ ಸುಧಾರಣೆ ಮಾಡುತ್ತಿದ್ದು, 2 ತಿಂಗಳಲ್ಲಿ ಹೊಸ ಲ್ಯಾಂಡ್ ರೆಕಾರ್ಡ್ ರೂಂ ತಯಾರಾಗಲಿದೆ. ಈ ಕೊಠಡಿಯಲ್ಲಿ ಎಲ್ಲಾ ದಾಖಲೆಯನ್ನು ಪರಿಶೀಲಿಸಲಾಗುತ್ತದೆ. ಕ್ಯಾಮೆರಾ ಅಳವಡಿಸಿ ದಲ್ಲಾಳಿಗಳನ್ನು ತಡೆದಿದ್ದೇವೆ. ಬಯೋ ಮೆಟ್ರಿಕ್ಸ್ ಮೂಲಕ ಎಲ್ಲ ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆ ಎಂದು ತಿಳಿಸಿದರು.

Comments are closed.