ಕರ್ನಾಟಕ

ವಾಹನ ಸವಾರರಿಗೆ ಸರ್ಕಾರದಿಂದ ಗುಡ್‌ ನ್ಯೂಸ್..!

Pinterest LinkedIn Tumblr


ಬೆಂಗಳೂರು: ಟ್ರಾಫಿಕ್ ದಂಡ ತೆತ್ತು ಸುಸ್ತಾಗಿರುವ ಜನರಿಗೆ ಸರ್ಕಾರ ಗುಡ್‌ ನ್ಯೂಸ್ ನೀಡಿದೆ. ಕೆಲ ದಿನಗಳಿಂದ ರಾಜ್ಯಾದ್ಯಂತ ಬರೀ ಟ್ರಾಫಿಕ್ ದಂಡದ್ದೇ ಸುದ್ದಿ. ಬೈಕ್ ತೆಗೆದುಕೊಳ್ಳಲು ಕೂಡ ಖರ್ಚು ಮಾಡದಷ್ಟು ಹಣವನ್ನ, ಹೆಲ್ಮೆಟ್ ಹಾಕದಿದ್ದಕ್ಕೆ, ಲೈಸೆನ್ಸ್ ತರದಿದ್ದಕ್ಕೆ, ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಿದವರೂ ಇದ್ದಾರೆ. ಆದ್ರೆ ಸರ್ಕಾರ 50%ನಷ್ಟು ದಂಡ ಕಡಿಮೆ ಮಾಡಿದೆ.

ಸಂಚಾರಿ ದಂಡ ಕಡಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ನೂತನ ದಂಡ ಪರಿಷ್ಕರಣೆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಶೇ. 50ರಷ್ಟು ದಂಡ ಕಡಿತಗೊಳಿಸಿದ್ದು, ದಂಡ ಕಡಿತಗೊಳಿದ ಪಟ್ಟಿ ಅನುಮೋದನೆಗೆ ರಾಜ್ಯ ಸಾರಿಗೆ ಇಲಾಖೆಗೆ ನೂತನ ದಂಡ ಪರಿಷ್ಕರಣೆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಎಷ್ಟು ದಂಡ ಕಡಿತ.?

ಹೆಲ್ಮೆಟ್ ರಹಿತ ಚಾಲನೆ,1000 ರೂ. ನಿಂದ 500 ರೂ. ದಂಡ ಇಳಿಸಲಾಗಿದೆ. ಲೈಸೆನ್ಸ್ ರಹಿತ ಚಾಲನೆ 5000 ರೂ. ರಿಂದ 2000 ರೂ. ದಂಡ ಇಳಿಸಿದ್ದು, ನೋಂದಣಿ ಇಲ್ಲದ ವಾಹನಗಳು 5000ರೂ. ಬದಲು1000 ರೂ. ಕಟ್ಟಬೇಕು. ಮಾಲಿನ್ಯ ನಿಯಮ ಉಲ್ಲಂಘನೆ ಮಾಡಿದ್ರೆ 10000 ರೂ. ಬದಲು 1000 ರೂ. ಕಟ್ಟಬೇಕು.

ಇನ್ನು ಸಿಎಂ ಸೂಚನೆ ಮೇರೆಗೆ ದಂಡ ಕಡಿತಗೊಳಿಸಲಾಗಿದ್ದು, ವಾಹನ ಸವಾರರ ಒತ್ತಡಕ್ಕೆ ಮಣಿದು ದಂಡ ಇಳಿಕೆಗೆ ಸರ್ಕಾರ ಇಂದೇ ಅಸ್ತು ಅನ್ನುವ ಸಾಧ್ಯತೆ ಹೆಚ್ಚಿದೆ.

Comments are closed.