ಕರ್ನಾಟಕ

ವಿವಾಹಿತ ಮಹಿಳೆ ಫೋನ್ ನಲ್ಲಿ ಮಾತನಾಡುವುದಕ್ಕೆ ಈತ ಮಾಡಿದ್ದೇನು ಗೊತ್ತಾ…?

Pinterest LinkedIn Tumblr


ತುಮಕೂರು: ತನ್ನ ಹೆಂಡತಿ ಬಿಟ್ಟು ಬೇರೆಯವರ ಹೆಂಡತಿ ಬಗ್ಗೆ ಇಲ್ಲೊಬ್ಬ ಕಿರಾತಕ ತೀರಾ ತಲೆ ಕೆಡಿಸಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.

ತುಮಕೂರು ನಗರದ ಉಪ್ಪಾರಳ್ಳಿಯ ಸ್ಟೋರಿ ಇದು, ವೀಣಾ ಎಂಬ ಮಹಿಳೆ ಫೋನ್ನಲ್ಲಿ ಮಾತನಾಡಿದರು ಕಾಲ್ ಲಿಸ್ಟ್ ತೆಗೆದು ನಿನ್ನ ಗಂಡನಿಗೆ ಒಪ್ಪಿಸುತ್ತೇನೆ. ನಿನ್ನ ಹೆಂಡತಿ ನಡವಳಿಕೆ ಸರಿಯಿಲ್ಲ. ದಾರಿತಪ್ಪುತಿದ್ದಾಳೆ ಎಂದು ಕಂಪ್ಲೆಂಟ್ ಮಾಡುತ್ತೇನೆ ಎಂದು ಸುಹೇಲ್ ಎಂಬ ಕಿರಾತಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪ ಮಾಡಲಾಗಿದೆ.

ತಾನು ಪೊಲೀಸ್ ಇನ್ಫಾರ್ಮರ್, ಕಳೆದ 15 ವರ್ಷದಿಂದ ಪೊಲೀಸರಿಗೆ ಮಾಹಿತಿದಾರ. ಹಾಗಾಗಿ ಪೊಲೀಸರು ಮತ್ತು ನನ್ನ ನಡುವಿನ ಒಡನಾಟ ಚೆನ್ನಾಗಿದೆ. ನಿನಗೆ ಏನು ಬೇಕಾದರೂ ಮಾಡಬಲ್ಲೆ. ಹೀಗೆಂದು ಸುಹೇಲ್ ಎಂಬ ವ್ಯಕ್ತಿ ವೀಣಾ ಎಂಬ ವಿವಾಹಿತ ಮಹಿಳೆಗೆ ಸುಖಾಸುಮ್ಮನೆ ಕಾಡುತಿದ್ದಾನೆ.

ಉಪ್ಪಾರಹಳ್ಳಿಯ ನಿವಾಸಿಯಾದ ಸುಹೇಲ್ ಹಾಗೂ ವೀಣಾ ಇಬ್ಬರ ಕುಟುಂಬ ಪರಸ್ಪರ ಪರಿಚಯಸ್ಥರು. ಆದರೆ ಕಳೆದ ಒಂದು ತಿಂಗಳಿನಿಂದ ಸುಹೇಲ್ ವೀಣಾ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾನಂತೆ. ವೀಣಾ ಯಾರ ಜೊತೆ ಮಾತನಾಡಿದರು ಅನುಮಾನ ಪಡುವ ಸುಹೇಲ್ ವೀಣಾ ಗಂಡನಿಗೆ ಫಿಟಿಂಗ್ ಇಡುತಿದ್ದಾನಂತೆ. ಪೊಲೀಸರ ಸಹಾಯದಿಂದ ವೀಣಾಳ ಕಾಲ್ ಲಿಸ್ಟ್ ತೆಗೆದು ಈಕೆ ದಾರಿತಪ್ಪುತಿದ್ದಾಳೆ ಕಂಡಕಂಡ ಜೊತೆ ಮಾತನಾಡುತ್ತಾಳೆ ಎಂದು ಸಂಸಾರದಲ್ಲಿ ಹುಳಿ ಹಿಂಡುತಿದ್ದಾನಂತೆ. ವೀಣಾಳ ಪತಿ ಸುಹೇಲ್ ದೂರಿಗೆ ತಲೆ ಕೆಡಿಸಿಕೊಳ್ಳದಿದ್ದರೂ ಪದೇ ಪದೇ ಫೋನ್ ಮಾಡಿ ಕಿವಿ ಕಚ್ಚುತಿದ್ದಾನಂತೆ, ಈ ಕಿರಾತಕನ ಹುಚ್ಚು ವರ್ತನೆಯಿಂದ ವೀಣಾ ಕುಟುಂಬದಲ್ಲಿ ನೆಮ್ಮದಿಯೇ ಮಾಯವಾಗಿದೆ.

ಸುಹೇಲ್ ಹುಚ್ಚಾಟ ಇಷ್ಟಕ್ಕೆ ಮುಗಿದಿಲ್ಲ. ಸಿಕ್ಕ ಸಿಕ್ಕ ಕಡೆಯೆಲ್ಲ ವೀಣಾಳನ್ನು ನಿಲ್ಲಿಸಿ ಅವಮಾನಿಸುತ್ತಾನಂತೆ. ನೀನು ಬೇರೆ ಗಂಡಸರ ಜೊತೆ ಮಾತನಾಡಬಾರದು, ಹಾಗೆ ಮಾಡಿದರೆ ನಿನ್ನ ಸಾಯಿಸ್ತಿನಿ ಎಂದು ಚಾಕು ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕ್ತಾನಂತೆ. ಮನೆ ಬಳಿ ಬಂದು ವೀಣಾಳ ತಾಯಿಗೂ ಅವಾಚ್ಚ ಶಬ್ಥದಿಂದ ನಿಂದಿಸಿದ್ದು. ಸುಹೇಲ್​​ನ ವರ್ತನೆಯಿಂದ ವೀಣಾಳ ಕುಟುಂಬ ಸೊರಗಿ ಹೋಗಿದೆ.

Comments are closed.