ಕರ್ನಾಟಕ

ಅನರ್ಹಗೊಂಡ ಶಾಸಕರನ್ನು ನಾವು ದೇವರಂತೆ ಕಾಣಬೇಕು, 17 ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ‌

Pinterest LinkedIn Tumblr

ಬೆಂಗಳೂರು: ಅನರ್ಹಗೊಂಡ ಶಾಸಕರನ್ನು ನಾವು ದೇವರಂತೆ ಕಾಣಬೇಕು. 17 ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನ್ಯಾಯಾಲಯದ ತೀರ್ಪು ಬಂದ ತಕ್ಷಣ ಅವಕಾಶ ನೀಡಬೇಕು ಎಂದು ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಹೇಳಿಕೆ ನೀಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅನರ್ಹರಿಂದ ಸರ್ಕಾರ, ಅರ್ಹರಿಂದ ಸರ್ಕಾರವಲ್ಲ. ಹೊರಗಿನಿಂದ ಬಂದವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಅವರನ್ನು ಸರಿಯಾಗಿ ನೋಡಿಕೊಂಡರೆ ಮಾತ್ರ ಸರ್ಕಾರ ಸುಭದ್ರವಾಗಿರುತ್ತದೆ. ಎಲ್ಲಾ ಅನರ್ಹರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಇನ್ನೊಂದು ತಿಂಗಳಲ್ಲಿ ನಮ್ಮ ಕುಟುಂಬದಿಂದ ಒಬ್ಬರು ಸಚಿವರಾಗುತ್ತಾರೆ. ಲಕ್ಷ್ಮಣ ಸವದಿಯನ್ನು ಹೈಕಮಾಂಡ್ ಆಯ್ಕೆ ಮಾಡಿದ್ದರೂ, ಸವದಿಗೆ ಯಾಕೆ ಸ್ಥಾನ ಎಂದು ಪ್ರಶ್ನಿಸುವ ಹಕ್ಕು ನಮಗಿದೆ. ನಾನು ಬಂಡಾಯದ ನಾಯಕನಲ್ಲ. ಕತ್ತಿಗೆ ಸಚಿವ ಸ್ಥಾನ ಸಿಗದಿರುವುದು ನಮಗೂ ಬೇಸರವಾಗಿದೆ. ಅವರಿಗೂ ಪಕ್ಷದ ಮಟ್ಟದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಶಾಸಕ ಉಮೇಶ್ ಕತ್ತಿ ಪರ ನಾನು ಇದ್ದೇನೆ ಎಂದು ತಿಳಿಸಿದರು.

ಸಿಎಂ ಅಸಮಾಧಾನ ಸರಿಪಡಿಸಿ ಮೂರು ವರ್ಷಗಳ ಸರ್ಕಾರ ರಚನೆ ಮಾಡಬೇಕು. ಅಸಮಾಧಾನ ಲಿಸ್ಟ್ ಇಂದ ನನ್ನ ಹೆಸರು ತೆಗೆಯಿರಿ. ನಾನು ಬಂಡಾಯದ ನಾಯಕನಲ್ಲ. ಬೆಳಗಾವಿ ಗದ್ದುಗೆ ಜಾರಕಿಹೊಳಿ‌ ಮತ್ತು ಕತ್ತಿ ಕುಟುಂಬ ಸೇರಿ ಹಿಡಿಯುತ್ತದೆ. ನಮ್ಮದು ಹೊಂದಾಣಿಕೆ ರಾಜಕಾರಣ. ಉಮೇಶ್ ಕತ್ತಿ ಮತ್ತು ಜಾರಕಿಹೊಳಿ‌ ಸೇರಿ ರಾಜಕಾರಣ ಮಾಡುತ್ತೇವೆ ಎಂದರು.

Comments are closed.