ಇತ್ತ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿ ಮುಂಬೈ ಪಾಲಾಗಿರುವ ಅತೃಪ್ತ ಶಾಸಕರಿಗೆ ರಾಜೀನಾಮೆ ಪರಿಶೀಲನೆ ವೇಳೆ ಶಾಕ್ ನೀಡಿದ ಬೆನ್ನಲ್ಲೇ ಮುಂಬೈನಲ್ಲಿ ರೆಬೆಲ್ ಶಾಸಕರು ಟೆನ್ಸನ್ ಮೂಡಗೆ ಜಾರಿದ್ದಾರೆ.
ಹೌದು ಸ್ಪೀಕರ್ 8 ಜನರ ರಾಜೀನಾಮೆ ಅಂಗೀಕರಿಸದೇ ಇರೋದರಿಂದ ಶಾಸಕರು ಫುಲ್ ಆತಂಕಕ್ಕೊಳಗಾಗಿದ್ದು, ರಿನೈಸೆನ್ಸ್ ಹೊಟೇಲ್ನಲ್ಲಿ ಅತೃಪ್ತ ಶಾಸಕರು ತುರ್ತು ಮೀಟಿಂಗ್ ನಡೆಸಿ ಮುಂದಿನ ನಡೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇಂದು ಸಂಜೆಯೇ ಬೆಂಗಳೂರಿಗೆ ವಾಪಸ್ಸಾಗಬೇಕೇ? ಅಥವಾ ಕಾದು ನೋಡುವ ತಂತ್ರ ಆನುಸರಿಸಿ ಸ್ಪೀಕರ್ ಖುದ್ದು ಕರೆದ ಮೇಲೆಯೇ ಬೆಂಗಳೂರಿಗೆ ಆಗಮಿಸಬೇಕೆ ಎಂಬುದರ ಚರ್ಚೆ ನಡೆದಿದೆ. ಇನ್ನೊಂದೆಡೆ ಕ್ರಮಬದ್ಧವಾಗಿ ರಾಜೀನಾಮೆ ನೀಡಲು ಇಂದೇ ಬೆಂಗಳೂರಿಗೆ ವಾಪಸ್ಸಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಅತೃಪ್ತ ಶಾಸಕರ ಭೇಟಿಗೆ ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಮೋಹಿಂತ್ ಕಂಬೋಜ್ ಕೂಡ ಆಗಮಿಸಿದ್ದು, ಅತೃಪ್ತರ ತಂಡದಲ್ಲಿ ಚಟುವಟಿಕೆ ಜೋರಾಗಿದೆ.
Comments are closed.