ಕರ್ನಾಟಕ

ಎರಡು ಪಕ್ಷಗಳು ಹೊಂದುಕೊಂಡು ಹೋದ್ರೆ ನಾಲ್ಕು ವರ್ಷದ ಬಳಿಕ ಚುನಾವಣೆ ಆಗುತ್ತೇ – ದೇವೇಗೌಡ

Pinterest LinkedIn Tumblr


ಬೆಂಗಳೂರು: ಎರಡು ಪಕ್ಷಗಳು ಹೊಂದುಕೊಂಡು ಹೋದ್ರೆ ನಾಲ್ಕು ವರ್ಷದ ಬಳಿಕ ಚುನಾವಣೆ ಆಗತ್ತೇ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ ಅವರು ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಜೆಡಿಎಸ್ ಮಹಿಳಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷದಲ್ಲಿ ಪಕ್ಷ ಸಂಘಟನೆ ಆಗಬೇಕು ಕುಮಾರಸ್ವಾಮಿ ಸರ್ಕಾರ ನಡೆಸುತ್ತಾರೆ. ನಾನು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಇನ್ನು ಹೆಣ್ಣುಮಕ್ಕಳಿಗೆ ರಾಜಕೀಯ ಶಕ್ತಿ ಕೊಡುವ ಯೋಚನೆ ಮಾಡುತ್ತೇನೆ. ರಾಜಕೀಯ ಬದುಕಿನಲ್ಲಿ ಅನೇಕ ಏಳು-ಬೀಳು ನೋಡಿದ್ದೇನೆ. ಕುಗ್ಗೋದಿಲ್ಲ ನಾನು, ಸಂಘಟನೆ ಮಾಡುತ್ತೇನೆ. ಮಹಿಳೆಯರಿಗೆ ಶಕ್ತಿ ಕೊಡುತ್ತೇನೆ ಎಂದು ಹೆಚ್​.ಡಿ ದೇವೇಗೌಡರು ಮಾತನಾಡಿದರು.

ಅಷ್ಟೇ ಅಲ್ಲದೇ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮೋದಿ ಅವರು ಮಾತ್ರ ಆಸಕ್ತಿ ವಹಿಸುತ್ತಿಲ್ಲ. ಮನಮೋಹನ ಸಿಂಗ್ ಅವರೂ ಈ ಬಗ್ಗೆ ಆಸಕ್ತಿ ತೋರಿದ್ದರು. ನಾನು ಇದನ್ನ ಮತ್ತೆ ನೆನಪಿಸಬೇಕಿತ್ತು. ಆದರೆ, ನಾನು ಸೋತಿದ್ದೇನೆ. ಆದರೂ ಪ್ರಾದೇಶಿಕ ಪಕ್ಷ ಉಳಿಸುವ ಕೆಲಸ ಮಾಡುತ್ತೇನೆ ಎಂದರು.

ದೇಶದಲ್ಲಿ 51%ರಷ್ಟು ಮಹಿಳೆ 49% ಪುರುಷರಿದ್ದಾರೆ. ಜುಲೈನಲ್ಲಿ ಮಹಿಳಾ ಸಮಾವೇಶ ಮಾಡುತ್ತೀನಿ, ಶಿಕ್ಷಕ ವರ್ಗಕ್ಕೆ 50% ಮೀಸಲಾತಿ ಕೊಟ್ಟಿದ್ದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಗೂ ಮಹಿಳಾ ಮೀಸಲಾತಿ ಕೊಟ್ಟೆ. ಮೀಸಲಾತಿ ಕಾರಣದಿಂದ ಮಹಿಳೆಯರು ಮೇಯರ್ ಆದರು ಎಂದು ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡರು ನುಡಿದರು.

Comments are closed.