ಕರ್ನಾಟಕ

ಕೃಷಿಗಾಗಿ ಮಲೆನಾಡಿಗೆ ಮರಳಿದ ಟೆಕ್ಕಿ ಸಹೋದರಿಯರು!

Pinterest LinkedIn Tumblr

ಅವರಿಬ್ಬರೂ ಅವಳಿ ಜವಳಿ… ಒಟ್ಟಿಗೆ ಇಂಜಿನಿಯರಿಂಗ್ ಕೂಡ ಮಾಡಿದ್ರು.. ಒಳ್ಳೆ ಮಾರ್ಕ್ಸ್ ಕೂಡ ತೆಗೆದುಕೊಂಡ್ರು.. ಅದ್ರಲ್ಲಿ ಒಬ್ಬರು ವಿಟಿಯುಗೆ 6ನೇ ರ್ಯಾಂಕ್ ಕೂಡ ಬಂದಿದ್ರೂ.. ಆದ್ರೂ ಇಂಜಿನಿಯರಿಂಗ್​ ಸಹೋದರಿಯರು ಗುಡ್ ಬೈ ಹೇಳಿದ್ದಾರೆ. ಟೆನ್ಷನ್ ತೆಗೆದುಕೊಂಡು ಲ್ಯಾಪ್​ಟಾಪ್​ ಮುಂದೆ ಕುಳಿತುಕೊಂಡು ಕೆಲಸ ಮಾಡೋದಕ್ಕೆ ಬ್ರೇಕ್ ಹಾಕಿ.. ತಮ್ಮೂರಿಗೆ ವಾಪಸ್ ಬಂದಿದ್ದಾರೆ.. ಹಾಗಾದ್ರೆ ಆ ಸಹೋದರಿಯರು ಯಾರು.. ಈಗ ಏನ್ ಮಾಡ್ತಾ ಇದಾರೆ ಅನ್ನೋದಕ್ಕೆ ಇಲ್ಲಿದೆ ಒಂದು ರಿಪೋರ್ಟ್.

ಒಬ್ಬರು ಗಗನ.. ಮತ್ತೊಬ್ಬರು ಮೇಘ… ಇಬ್ಬರೂ ಅವಳಿ ಜವಳಿ ಮಕ್ಕಳು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರು ರಾಜೇಂದ್ರ ದಂಪತಿಯ ಮಕ್ಕಳು.. ಉಜಿರೆಯ ಎಸ್​ಟಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ರು.. 2018ರಲ್ಲಿ ಇಂಜಿನಿಯರಿಂಗ್ ಇನ್​ಫೋರ್​ಮೇಷನ್ ಸೈನ್​ನಲ್ಲಿ ಉತ್ತಮ ಅಂಕಗಳು ಬಂದ್ವು.. ಅದ್ರಲ್ಲೂ ವಿಟಿಯು ವಿವಿಗೆ ಗಗನ 6ನೇ ರ್ಯಾಂಕ್.. ಆದರೂ ಕೂಡ ಸಹೋದರಿಯರು ಇಂಜಿನಿಯರಿಂಗ್​ಗೆ ಗುಡ್ ಬೈ ಹೇಳಿ.. ಊರಿನತ್ತ ಮುಖ ಮಾಡಿದ್ದಾರೆ.

 

ಒತ್ತಡದ ಲೈಫ್ ಯಾಕೆ ಬೇಕು.. ನೆಮ್ಮದಿಯಿಂದ ಇರೋಣ.. ಜೊತೆಗೆ ಏನಾದ್ರೂ ಸಾಧನೆ ಮಾಡೋಣ ಅಂತ ಕೃಷಿಯತ್ತ ಮುಖ ಮಾಡಿದ್ದಾರೆ. ಔಷಧೀಯ ಗಿಡಗಳನ್ನು ಬೆಳೆಸ್ತಾ ಇರೋ ತಂದೆಗೆ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಇಸ್ರೇಲ್ ಕೃಷಿ ಅಳವಡಿಕೆ, ಇಂಗು ಗುಡಿಯ ಮಹತ್ವವನ್ನೂ ತಿಳಿಸುವ ಕಾರ್ಯ ಮಾಡ್ತಾ ಇದಾರೆ.

 

ಬೆಂಗಳೂರಿನಲ್ಲಿ ಇದ್ದುಕೊಂಡು ಹತ್ತಾರು ಗಂಟೆ ವರ್ಕ್​ ಮಾಡಿದ್ರೆ ಹಣ ಸಿಗುತ್ತೆ ನೆಮ್ಮದಿ ಸಿಗೋದಿಲ್ಲ.. ಬೇರೆ ಕಡೆ ಹೋಗಿ ದುಡಿಯೋದು ಯಾಕೆ.. ತಂದೆ ರಾಜೇಂದ್ರ ಹಲವಾರು ವರ್ಷಗಳಿಂದ ತರೇವಾರಿ ಔಷಧಿಯ ಸಸ್ಯಗಳನ್ನು ಬೆಳೆಸೋದ್ರಲ್ಲಿ ತಲ್ಲೀನರಾಗಿದ್ದಾರೆ. ನಾವು ಕೂಡ ಅವರ ಜೊತೆ ಕೈ ಜೋಡಿಸೋಣ ಅಂತ ಸಹೋದರಿಯರು ನಿರ್ಧರಿಸಿ.. ಕೃಷಿಯಲ್ಲಿಯೇ ಏನಾದರೂ ಸಾಧನೆ ಮಾಡಲು ಪಣತೊಟ್ಟಿದ್ದಾರೆ. ಔಷಧೀಯ ಸಸ್ಯಗಳನ್ನು ಬೆಳೆಸೋದ್ರ ಜೊತೆಗೆ ಇಂಗು ಗುಂಡಿಯ ಬಗ್ಗೆಯೂ ಅಧ್ಯಯನ ನಡೆಸಿ ಅದರ ಮಹತ್ವವನ್ನು ಸಾರಿ.. ಅಂತರ್ಜಲ ಮಟ್ಟ ವೃದ್ಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

ಇಂಜಿನಯರ್​ಗಲ್ಲಿ ರಾಂಕ್ ಪಡೆದು ಒಳ್ಳೆ ಹುದ್ದೆ ಗಿಟ್ಟಿಸಿಕೊಂಡು ಬೆಂಗಳೂರಲ್ಲೋ.. ವಿದೇಶದಲ್ಲೋ ಸೆಟ್ಲ್ ಆಗಬಹುದಿತ್ತು.. ಆದರೆ, ನಮ್ಮೂರಲ್ಲೇ ಇದ್ದುಕೊಂಡು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು.. ಅಪ್ಪ ಮತ್ತು ಅಮ್ಮನ ಜೊತೆಯಲ್ಲಿ ಇರಬೇಕು.. ಅವರ ಹಾದಿಯಲ್ಲಿಯೇ ಸಾಗಲು ನಿರ್ಧರಿಸುವ ಮೂಲಕ ಉದ್ಯೋಗ ಹರಸಿ ಬೆಂಗಳೂರು ಸೇರಿದಂತೆ ಇತರೆ ಕಡೆಗೆ ಗೂಳೆ ಹೋಗರಿಗೆ ಮಾದರಿಯಾಗಿದ್ದಾರೆ.. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ದುಡಿಮೆಯ ನಂಬಿ ಬದುಕು.. ಅದರಲಿ ದೇವರ ಹುಡುಕು ಎಂದು ಸಾರಿ ಸಾರಿ ಹೇಳ್ತಾ ಇದಾರೆ.

Comments are closed.